Urdu   /   English   /   Nawayathi

ಮೋದಿ ಬೆಂಬಲಿಗನಿಂದ ಅನುರಾಗ್ ಕಶ್ಯಪ್​ ಮಗಳ ಮೇಲೆ ಅತ್ಯಾಚಾರದ ಬೆದರಿಕೆ?

share with us

ನವದೆಹಲಿ: 25 ಮೇ 2019 (ಫಿಕ್ರೋಖಬರ್ ಸುದ್ದಿ) ಸಾರ್ವತ್ರಿಕ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ನರೇಂದ್ರ ಮೋದಿಗೆ ವಿಶ್ವದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಆದರೆ ಭಾರತದ ಖ್ಯಾತ ನಿರ್ದೇಶಕರೊಬ್ಬರು ಶುಭಾಶಯದೊಂದಿಗೆ, ಆರೋಪವನ್ನೂ ಮಾಡಿದ್ದಾರೆ. ಬಾಲಿವುಡ್​ ನಿರ್ದೇಶಕ ಅನುರಾಗ್ ಕಶ್ಯಪ್, ಚುನಾವಣೆಯಲ್ಲಿ ಜಯಸಿದ ಮೋದಿಗೆ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ. ಇದರ ಜತೆಗೆ ಮೋದಿ ಬೆಂಬಲಿಗ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಯೊಡ್ಡಿದ್ದಾನೆ ಎಂದೂ ಹೇಳಿಕೊಂಡಿದ್ದಾರೆ.

 

Anurag Kashyap@anuragkashyap72

Dear @narendramodi sir. Congratulations on your victory and thank you for the message of inclusiveness. Sir please also tell us how do we deal with these followers of yours who celebrate your victory by threatening my daughter with messages like this for me being your dissenter.

27.3K

11:24 PM - May 23, 2019

19.5K people are talking about this

Twitter Ads info and privacy

ಡಿಯರ್​ ನರೇಂದ್ರ ಮೋದಿ ಸರ್​, ದಿಗ್ವಿಜಯ ಸಾಧಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಆದರೆ, ನನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಹೇಳುವ ನಿಮ್ಮ ಬೆಂಬಲಿಗರಿಗೆ ನಾನೇನು ಮಾಡಬೇಕು ಹೇಳಿ ಎಂದು ಕಶ್ಯಪ್ ಟ್ವೀಟ್​ ಮಾಡಿದ್ದಾರೆ. ಹೀಗೆ ಬೆದರಿಕೆಯೊಡ್ಡಿದ ಪೋಸ್ಟ್​ ಅನ್ನೂ ಸಹ ಪೋಸ್ಟ್​ ಮಾಡಿದ್ದಾರೆ. ಮೋದಿ ಬೆಂಬಲಿಗ ಎಂದು ಕರೆದುಕೊಂಡಿರುವ ಚೌಕೀದಾರ್ ರಾಮ್​ಸಂಘ್ವಿ ಎಂಬಾತ ಇನ್​ಸ್ಟಗ್ರಾಂನಲ್ಲಿ ಕಶ್ಯಪ್​ ಮಗಳು ಆಲಿಯಾ ಕಶ್ಯಪ್​ಗೆ ಅತ್ಯಾಚಾರ ಮಾಡುವ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಟೀಕಿಸಿದವರಲ್ಲಿ ಅನುರಾಗ್ ಕಶ್ಯಪ್​ ಸಹ ಒಬ್ಬರು. ಕಳೆದ ಐದು ವರ್ಷಗಳಲ್ಲಿ ಮೋದಿ ಬಗ್ಗೆ ಕೆಲ ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದ್ದರು

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا