Urdu   /   English   /   Nawayathi

ಅಸಾದುದ್ದೀನ್ ಓವೈಸಿ 85 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ

share with us

ಹೈದರಾಬಾದ್: 23 ಮೇ 2019 (ಫಿಕ್ರೋಖಬರ್ ಸುದ್ದಿ) ಹಿರಿಯ ಮುಖಂಡ ಅಸಾದುದ್ದೀನ್ ಓವೈಸಿ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ 85 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆಲ್ ಇಂಡಿಯಾ ಮಜಿಲಿಸ್ -ಇ-ಇತ್ತೆಹುದುಲ್ ಮುಸ್ಲೀಮೀನ್ (ಎಐಎಂಇಐಎಂ) ವತಿಯಿಂದ ಸ್ಪರ್ಧಿಸಿರುವ ಓವೈಸಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿದ್ದಾರೆ. ಬಿಜೆಪಿ ಭಗವಂತರಾವ್, ಕಾಂಗ್ರೆಸ್ ನ ಫಿರೋಜ್ ಖಾನ್, ಟಿಆರ್ ಎಸ್ ನ ಪಿ.ಶ್ರೀಕಾಂತ್ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು. ಇವರಲ್ಲಿ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಅಭ್ಯರ್ಥಿಗಳಿಂತ ಬಿಜೆಪಿ ಅಭ್ಯರ್ಥಿ ಆರಂಭದಲ್ಲಿ ಪೈಪೋಟಿ ನೀಡಿದರೂ ಮಧ್ಯಾಹ್ನದ ವೇಳೆಗೆ ಓವೈಸಿಯನ್ನು ಹಿಮ್ಮೆಟ್ಟಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವಲ್ಲಿ ದಾಪುಗಾಲು ಇಡುತ್ತಿರುವ ಹೊತ್ತಿಗೆ ಹೈದರಾಬಾದ್ ನಲ್ಲಿ ಓವೈಸಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಸಾಗಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا