Urdu   /   English   /   Nawayathi

ಉದ್ಯಮಿ ಮನೆಗೆ ಐಟಿ ಅಧಿಕಾರಿಗಳ ದಾಳಿ

share with us

ಮಂಗಳೂರು: 19 ಮೇ (ಫಿಕ್ರೋಖಬರ್ ಸುದ್ದಿ) ನಗರದ ಕಾರ್​ಸ್ಟ್ರೀಟ್​ನಲ್ಲಿ ಶುಕ್ರವಾರ ದಾಖಲೆ ರಹಿತವಾಗಿ 1 ಕೋಟಿ ರೂ. ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಮರುದಿನ ಇದೇ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಉದ್ಯಮಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ರಾಜು ಪವಾರ್ ಎಂಬುವರಿಗೆ ಸೇರಿದ ಕಾರ್​ಸ್ಟ್ರೀಟ್​ನ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಹಲವು ಗಂಟೆ ಕಾಲ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದರು. ಶುಕ್ರವಾರ ಬೆಳಗ್ಗೆ 1 ಕೋಟಿ ರೂ. ಕೊಂಡೊಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಮಂಜುನಾಥ್ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆತನ ಬಳಿ ಈ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಈ ಹಣ ನೀಡಿದ್ದು, ಮಂಗಳೂರಿನ ವ್ಯಕ್ತಿಗೆ ತಲುಪಿಸುವಂತೆ ತಿಳಿಸಿದ್ದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಐಟಿ ಇಲಾಖೆ ಅಧಿಕಾರಿಗಳು ರಾಜು ಪವಾರ್ ಎಂಬುವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ನ್ಯಾಯಾಂಗ ಬಂಧನ: ದಾಖಲೆಯಿಲ್ಲದೆ ಹಣ ಕೊಂಡೊಯ್ದು ಬಂಧಿತನಾದ ಆರೋಪಿ ಮಂಜುನಾಥ್​ನನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿದ್ದು, 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

24 ಲಕ್ಷ ರೂ. ಪತ್ತೆ

ನಗರದ ಕಾರ್​ಸ್ಟ್ರೀಟ್ ಮಹಮ್ಮಾಯಿ ದೇವಸ್ಥಾನದ ಬಳಿ ಶನಿವಾರ ಬೆಳಗ್ಗೆ ಮತ್ತೆ ದಾಖಲೆರಹಿತ 24 ಲಕ್ಷ ರೂ. ನಗದನ್ನು ಬಂದರು ಪೊಲೀಸರು ಪತ್ತೆ ಮಾಡಿ ದಾವಣಗೆರೆಯ ಮಂಜುನಾಥ್(40) ಎಂಬಾತನನ್ನು ಬಂಧಿಸಿದ್ದಾರೆ. ದಾವಣಗೆರೆಯಿಂದ ಮಂಗಳೂರಿನ ವ್ಯಕ್ತಿಗೆ ನೀಡಲು ಈ ಹಣ ತಂದಿದ್ದನು ಎನ್ನಲಾಗಿದೆ. ದಾವಣಗೆರೆಯ ವ್ಯಕ್ತಿಯೊಬ್ಬರು ಹಣವನ್ನು ಮಂಗಳೂರಿನ ವ್ಯಕ್ತಿಗೆ ನೀಡಲು ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಆತನಲ್ಲಿ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا