Urdu   /   English   /   Nawayathi

ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

share with us

ಶಿರಸಿ: 19 ಮೇ (ಫಿಕ್ರೋಖಬರ್ ಸುದ್ದಿ) ನಗರಕ್ಕೆ ನೀರು ಸರಬರಾಜು ಮಾಡುವ ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಲ್ಲಿ ಹರಿವು ಸಂಪೂರ್ಣ ನಿಂತಿದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿದ್ದರೂ ಮುಂದಿನ 10 ದಿನಗಳಿಗೆ ಅಂತೂ ಇಂತೂ ನೀರು ಸರಬರಾಜು ಮಾಡಬಹುದಾಗಿದೆ ! 

ಕಳೆದ ಒಂದು ತಿಂಗಳಿನಿಂದ ಮಳೆಯಾಗದಿರುವುದು ತಾಲೂಕಿನಲ್ಲಿ ತಾಪಮಾನ ಏರುವಂತೆ ಮಾಡಿದೆ. ಇದರ ಬೆನ್ನಲ್ಲೇ ಸಾರ್ವಜನಿಕರ ನೀರಿನ ಬಳಕೆಯ ಪ್ರಮಾಣವೂ ಏರಿದೆ. ಇನ್ನೊಂದೆಡೆ ನದಿಗಳು ಬತ್ತಿ ಮುಂದೆ ನಗರವಾಸಿಗಳಿಗೆ ಹೇಗೆ ನೀರು ಸರಬರಾಜು ಮಾಡಬೇಕು ಎಂದು ಅರಿಯದ ಸ್ಥಿತಿಯಲ್ಲಿ ನಗರಸಭೆ ಇದೆ. ಈಗಾಗಲೇ ಕೆಂಗ್ರೆ ಮತ್ತು ಅಘನಾಶಿನಿ ನದಿಗೆ ರೈತರು ಅಳವಡಿಸಿಕೊಂಡಿದ್ದ ಪಂಪ್ ಪಂಪ್​ಗಳನ್ನು ನಗರಸಭೆ ತೆಗೆಸಿದೆ. ನಗರಸಭೆ ಸಿಬ್ಬಂದಿ ಪ್ರತಿ ದಿನ ಈ ಎರಡೂ ನದಿಗಳಲ್ಲಿ ಸಂಚರಿಸಿ ಗುಂಡಿಗಳಲ್ಲಿರುವ ನೀರನ್ನು ಪಂಪ್ ಮಾಡಿ ಜಾಕ್​ವೆಲ್​ಗೆ ತರುವ ಸಾಹಸ ನಡೆಸಿದ್ದಾರೆ. ನಗರವಾಸಿಗಳು ಉದ್ಯಾನಗಳಿಗೆ ನೀರು ಬಿಡುವುದು ಮತ್ತು ವಾಹನಗಳನ್ನು ತೊಳೆಯುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಹವಾಮಾನ ಇಲಾಖೆ ಮಾನ್ಸೂನ್ ಆಗಮಿಸುವುದು ವಿಳಂಬವಾಗಲಿದೆ ಎಂಬ ಮುನ್ಸೂಚನೆ ನೀಡಿದ್ದು ನಗರವಾಸಿಗಳಿಗೆ ಇನ್ನಷ್ಟು ಆತಂಕ ಮೂಡಿಸಿದೆ. ಗುಂಡಿಗಳಲ್ಲಿ ಇರುವ ನೀರೂ ಖಾಲಿಯಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ನಗರಸಭೆ ಚಿಂತಿಸಲಾರಂಭಿಸಿದೆ.

ಬಿಸಿಲಿಗೆ ಹೆದರಿದ ಜನತೆ ತಾಲೂಕಿನಲ್ಲಿ ಈಗ ತಾಪಮಾನ ಏರುವ ಜೊತೆ ಬಿಸಿಲಿನ ಝುಳವೂ ಜೋರಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ನಗರದ ರಸ್ತೆಗಳಲ್ಲಿ ಸಂಚರಿಸುವವರ ಪ್ರಮಾಣ ಕಡಿಮೆಯಾಗಿದೆ. ಹಳ್ಳಗಳಲ್ಲಿ ನೀರಿನ ಹರಿವು ನಿಂತ ಕಾರಣ ಕೃಷಿ ತೋಟಗಳು ಒಣಗಲಾರಂಭಿಸಿವೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا