Urdu   /   English   /   Nawayathi

ಕೇದಾರನಾಥ ಯಾತ್ರೆ ‘ಎಲೆಕ್ಷನ್ ಗಿಮಿಕ್’ ಎಂಬ ಆರೋಪಕ್ಕೆ ಮೋದಿ ಹೇಳಿದ್ದೇನು ಗೊತ್ತೇ..?

share with us

ಕೇದಾರ್‍ನಾಥ್: 19 ಮೇ (ಫಿಕ್ರೋಖಬರ್ ಸುದ್ದಿ) ನಾನು ದೇವರ ಬಳಿ ಏನನ್ನೂ ಬೇಡಲಿಲ್ಲ. ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರ್‍ನಾಥ್ ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಕೇದಾರ್‍ನಾಥ್‍ನಲ್ಲಿ ನಿನ್ನೆಯಿಂದ ಇಡೀ ರಾತ್ರಿ ಧ್ಯಾನ ಮಾಡಿದ ಮೋದಿ, ಇಂದು ಬೆಳಗ್ಗೆ ಹೊರಬಂದರು. ಈ ವೇಳೆ ಚುನಾವಣಾ ಸಂದರ್ಭದಲ್ಲಿ ಮತ ಗಿಟ್ಟಿಸಲು ಅವರು ಅಲ್ಲಿ ಧ್ಯಾನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನರೇಂದ್ರ ಮೋದಿ ನಾನು ದೇವರಲ್ಲಿ ಯಾವುದನ್ನೂ ಕೇಳಿಕೊಳ್ಳಲಿಲ್ಲ. ಕೇದಾರ್‍ನಾಥ್‍ನಂತಹ ಪವಿತ್ರ ಸ್ಥಳಕ್ಕೆ ವರ್ಷದ ನಂತರ ಭೇಟಿ ನೀಡಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿ ಪಡಿಸಬೇಕೆಂಬ ಗುರಿ ಹೊಂದಿದ್ದೇನೆ. ದೇವರು ಮನುಷ್ಯನ ಸಾಮಥ್ರ್ಯಕ್ಕನುಗುಣವಾಗಿ ನೀಡುವ ಶಕ್ತಿ ಇದೆ. ನಾನು ಇದನ್ನು ಚುನಾವಣಾ ಲಾಭಕ್ಕಾಗಿ ಉಪಯೋಗಿಸಿಕೊಂಡಿಲ್ಲ. ಮಾಧ್ಯಮಗಳಲ್ಲಿ ಬರುವ ವಿಶ್ಲೇಷಣೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ. ಚುನಾವಣಾ ಆಯೋಗದ ಅನುಮತಿಯನ್ನು ಪಡೆದೇ ನಾನು ಇಲ್ಲಿಗೆ ಬಂದಿದ್ದೆ. ಉಳಿದೆಲ್ಲವೂ ಅವರವರ ಭಾವನೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದರು.  ಇನ್ನು ಮೋದಿಯವರ ಕೇದಾರ್‍ನಾಥ್ ಪ್ರವಾಸ ಕುರಿತಂತೆ ಪ್ರತಿಕ್ರಿಯಿಸಿರುವ ಉತ್ತರಾಖಂಡ್ ಬಿಜೆಪಿ ಘಟಕದ ಅಧ್ಯಕ್ಷ ಅಜಯ್‍ಭಟ್ ಇದೊಂದು ಧಾರ್ಮಿಕ ಭೇಟಿ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ. ಪ್ರಧಾನಿಯವರು ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಡಿಜಿಪಿಯವರು ಹೆಚ್ಚಿನ ಭದ್ರತೆ ಒದಗಿಸಿದ್ದರು. ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕೇದಾರ್‍ನಾಥ್ ಭೇಟಿ ನೀಡಿದ ಮೋದಿಯವರು ಇಂದು ಸಂಜೆ ನವದೆಹಲಿಗೆ ಹಿಂತಿರುಗಲಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا