Urdu   /   English   /   Nawayathi

ಎಲ್ಲಾ ಮೋದಿಗಳು ಕಳ್ಳರೇ ಹೇಳಿಕೆ: ರಾಹುಲ್ ಗಾಂಧಿಗೆ ಅರುಣಾಚಲ ಕೋರ್ಟ್ ನಿಂದ ಸಮನ್ಸ್

share with us

ಗುವಾಹತಿ: 18 ಮೇ (ಫಿಕ್ರೋಖಬರ್ ಸುದ್ದಿ) ಎಲ್ಲಾ ಮೋದಿಗಳು ಕಳ್ಳರೇ ಎಂದು ವಿವಾದಾತ್ಮ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರಿಗೆ ಅರುಣಾಚಲ ಪ್ರದೇಶದ ಸ್ಥಳೀಯ ಕೋರ್ಟ್ ಶನಿವಾರ ಸಮನ್ಸ್ ಜಾರಿ ಮಾಡಿದೆ. ರಾಹುಲ್ ಗಾಂಧಿ ವಿರುದ್ಧ ಪಸಿಘಾಟ್ ಮೂಲದ ವಕೀಲ ಒಮಿತ್ ಮೋದಿ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಪೂರ್ವ ಸಿಯಾಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್, ಜುಲೈ 24ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಮಹಾರಾಷ್ಟ್ರದ ನಾಂದೇಡ್‍ನಲ್ಲಿ ನಡೆದಿದ್ದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ವಜ್ರ ವ್ಯಾಪಾರಿ ನೀರವ್ ಮೋದಿ, ಉದ್ಯಮಿ ಲಲಿತ್ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಎಲ್ಲರ ಕೊನೆಯಲ್ಲಿ ಮೋದಿ ಅಂತ ಇದೆ. ಎಲ್ಲ ಕಳ್ಳರ ಹೆಸರಿನಲ್ಲಿ ಮೋದಿ ಸಾಮಾನ್ಯ ಹೆಸರಾಗಿರುವುದು ಹೇಗೆ? ನನಗೆ ಒಂದು ಸಂಗತಿಯ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا