Urdu   /   English   /   Nawayathi

ರಾಜಸ್ತಾನದಲ್ಲಿ ವಿಚಿತ್ರ ಕಾಯಿಲೆಯೊಂದಿಗೆ ಜನಿಸಿದ ಮಗು:ಹೆತ್ತವರಿಗೆ ಶಾಕ್​!

share with us

ನಗೌರ್: 18 ಮೇ (ಫಿಕ್ರೋಖಬರ್ ಸುದ್ದಿ) ರಾಜಸ್ತಾನದ ನಗೌರ್​ನಲ್ಲಿ ಜನಿಸಿದ ಗಂಡು ಮಗುವೊಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಗುವಿನ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದು,ದೇಹದ ಚರ್ಮ ವಿಚಿತ್ರ ಹಾಗೂ ಗಡುಸಾಗಿದೆ. ಈ ಖಾಯಿಲೆ ಹೇಗಿದೆ ಅಂದ್ರೆ, ಮಗುವಿನ ದೇಹ ಪೂರ್ತಿ ಪ್ಲಾಸ್ಟಿಕ್​ ಶೀಟ್​ನಿಂದ ಸುತ್ತಿದಂತೆ ಕಾಣುತ್ತಿದೆ. ಈ ಅಪರೂಪದ ಕಾಯಿಲೆಯ ಲಕ್ಷಣವನ್ನು ತಿಳಿಸಿದ ಆಸ್ಪತ್ರೆಯ ಶಿಶುವೈದ್ಯ ಡಾ. ಮುಲಾರಮ್ ಕಡೇಲಾ, 6 ಲಕ್ಷದಲ್ಲಿ ಒಂದು ಮಗುವಿಗೆ ಈ ಖಾಯಿಲೆ ಇರುತ್ತದೆ.ಈ ಲಕ್ಷಣಗಳಿರುವ ಮಗುವನ್ನು 'ಕಲೋಡಿಯನ್​ ಬೇಬಿ​' ಎಂದು ಕರೆಯಲಾಗುತ್ತದೆ. ಮಗುವಿನ ಚರ್ಮವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿದಂತೆ ಭಾಸವಾಗುತ್ತಿದೆ. ಮಗುವಿನ ಪೋಷಕರಾದ ಸಹದೇವ್ ಹಾಗೂ ದುರ್ಗಾ, ಗುದಾ ಭಗ್ವಾಂಡಾಸ್​ನ ನಿವಾಸಿಗಳಾಗಿದ್ದು, ಇದು ಅವರಿಗೆ ಜನಿಸಿದ ಮಕ್ಕಳಲ್ಲಿ ಬದುಕುಳಿದ ಎರಡನೇ ಮಗುವಾಗಿದೆ.ಈ ಹಿಂದೆ ಜನಿಸಿದ ಮೂರೂ ಮಕ್ಕಳು ಮೃತಪಟ್ಟಿದ್ದು,ನಾಲ್ಕನೇ ಮಗು ಬದುಕುಳಿದಿತ್ತು.ಈಗ ಈ ಮಗುವಿನ ಸ್ಥಿತಿ ನೋಡಿ ಮತ್ತೆ ಪೋಷಕರು ಆಘಾತಗೊಂಡಿದ್ದಾರೆ. ಸದ್ಯ ಮಗು ಉಸಿರಾಟದ ತೊಂದರೆಯಯಿಂದ ಬಳಲುತ್ತಿದ್ದು,ವಿಶೇಷ ನಿಗಾ ವ್ಯವಸ್ಥೆಯಲ್ಲಿಡಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا