Urdu   /   English   /   Nawayathi

2 ಮಿನಿ ಲಾರಿ ಅಕ್ರಮ ಗೋವಾ ಮದ್ಯ ವಶ

share with us

ಕಾರವಾರ: 16 ಮೇ (ಫಿಕ್ರೋಖಬರ್ ಸುದ್ದಿ) ಮಾಜಿ ಸಚಿವರ ಆಪ್ತನ ಮನೆಯ ಕಾಂಪೌಂಡ್​ನಲ್ಲಿ ಸಾಗಣೆಗೆ ಸಿದ್ಧವಾಗಿಟ್ಟಿದ್ದ ಎರಡು ಮಿನಿ ಲಾರಿಗಳಷ್ಟು ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಶಾಸಕಿ ರೂಪಾಲಿ ನಾಯ್ಕ ಅವರ ಜತೆಗಿದ್ದ, ಹಾಲಿ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಬೆಂಬಲಿಗ ದಿಲೀಪ ನಾಯ್ಕ ಎಂಬಾತನ ಶಿರವಾಡದ ಮನೆಯ ಕಾಂಪೌಂಡ್​ನಲ್ಲಿ ಇರಿಸಲಾಗಿದ್ದ ಎರಡು ಟಾಟಾ 207 ವಾಹನದಲ್ಲಿ ತುಂಬಿದ್ದ 833 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಒಟ್ಟು ಮೌಲ್ಯ 2,16,900 ರೂ.ಗಳಾಗಿದ್ದು, ವಾಹನದ ಮೌಲ್ಯ 9 ಲಕ್ಷ ರೂ. ಗಳಾಗಿವೆ. ವಾಹನದ ಮಾಲೀಕರಾದ ದೀಪಕ ಎಂ. ನಾಯ್ಕ ಹಾಗೂ ಸುರೇಶ ರಾಮಾ ಪಟಗಾರ ತಲೆಮರೆಸಿ ಕೊಂಡಿದ್ದಾರೆ. ಬುಧವಾರದ ದಾಳಿಯಲ್ಲಿ ಅಬಕಾರಿ ಅಧಿಕಾರಿಗಳಾದ ಆರ್.ಬಿ. ಹೊಸಳ್ಳಿ, ಮಿಲ್ಲರ್ ಜೆ. ಡಿಸೋಜಾ, ಫಯಾಸುದ್ದೀನ್ ಅನ್ಸಾರಿ, ಸಿಬ್ಬಂದಿ ಎನ್.ಎನ್. ಖಾನ್, ಶರೀಫ ವಾಲೀಕಾರ, ಶ್ರೀಕಾಂತ ಜಾಧವ, ಎಸ್.ಬಿ. ಬನಸೋಡೆ, ರಮೇಶ ಬಡಿಗೇರ, ರವಿಚಂದ್ರ ನಾಯ್ಕ, ಶಾನೂರ ಜಮಾದಾರ, ಮೀರಾಸಾಬ್ ನದಾಫ್, ವಿ.ಯು. ಲಮಾಣಿ ಇದ್ದರು.

ಪ್ರತ್ಯೇಕ ಕಂಪಾರ್ಟ್​ವೆುಂಟ್: ವಶಪಡಿಸಿಕೊಂಡ ಎರಡೂ ವಾಹನಗಳು ಮೀನು ಸಾಗಣೆಯ ಲಾರಿಯಂತೆ ಕಾಣುತ್ತವೆ. ಆದರೆ, ವಾಹನದಲ್ಲಿ ಸಾರಾಯಿ ತುಂಬಲು ಮೇಲ್ನೋಟಕ್ಕೆ ಕಾಣದಂತಹ ಪ್ರತ್ಯೇಕ ಕಂಪಾರ್ಟ್​ವೆುಂಟ್ ನಿರ್ವಿುಸಿಕೊಳ್ಳಲಾಗಿತ್ತು. ಚುನಾವಣೆಗೂ ಪೂರ್ವದಲ್ಲಿ ದಿಲೀಪ ನಾಯ್ಕಗೆ ಸೇರಿದ್ದ ಬೃಹತ್ ಪ್ರಮಾಣದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا