Urdu   /   English   /   Nawayathi

ಮೊಬೈಲ್‌ ಹ್ಯಾಕ್‌ ಆದೀತು; ಈಗಲೇ ನಿಮ್ಮ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡ್ಕೊಳ್ಳಿ

share with us

ಬೆಂಗಳೂರು: 15 ಮೇ (ಫಿಕ್ರೋಖಬರ್ ಸುದ್ದಿ) ನಿಮ್ಮ ಮೊಬೈಲ್‌ನಲ್ಲಿನ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಂಡಿದ್ದು ಯಾವಾಗ? ನಿಮ್ಮ ಕೆಲಸಗಳ ನಡುವೆ ಅದನ್ನು ನಿರ್ಲಕ್ಷಿಸಿದ್ದರೆ, ತಕ್ಷಣವೇ ಅದನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ಇಷ್ಟು ತುರ್ತಾಗಿ ವಾಟ್ಸ್‌ ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಿ ಎಂದು ಹೇಳಲು ಕಾರಣವಿದೆ. ವಾಟ್ಸ್‌ಆ್ಯಪ್‌ನಲ್ಲಿ ಭದ್ರತೆಯ ದೋಷ ಕಂಡುಬಂದಿದೆ. ಇದನ್ನು ಪತ್ತೆ ಮಾಡಿರುವ ವಾಟ್ಸ್‌ಆ್ಯಪ್‌, ಅದಕ್ಕೊಂದು ಪರಿಹಾರವನ್ನು ನೀಡಿ ಅಪ್ಲಿಕೇಷನ್‌ ಅನ್ನು ಅಪ್‌ಡೇಟ್‌ ಮಾಡಿದೆ. ಕೋಡ್‌ ಮೂಲಕ ಬರುವ ಒಂದು ಕರೆ (ಸ್ವೀಕರಿಸಿದರೂ ಅಥವಾ ಸ್ವೀಕರಿಸದಿದ್ದರೂ) ನಿಮ್ಮ ಮೊಬೈಲ್‌ ಅನ್ನು ಹ್ಯಾಕ್‌ ಮಾಡುತ್ತದೆ. ಇದರಿಂದ ನಿಮ್ಮ ಮೊಬೈಲ್‌ನಲ್ಲಿನ ಎಲ್ಲಾ ಕರೆಯ ದಾಖಲೆ, ಸಂದೇಶ, ಇ–ಮೇಲ್‌ಗಳು, ಸಂಪರ್ಕ ಸಂಖ್ಯೆಗಳು.. ಹೀಗೆ ನಿಮ್ಮಿಂದ ಪಡೆದ ಎಲ್ಲಾ ದಾಖಲೆಗಳು ಇಸ್ರೇಲಿನ ಸೈಬರ್‌ ಇಂಟೆಲಿಜೆನ್ಸ್‌ ಕಂಪನಿ ಎನ್‌ಎಸ್‌ಒಗೆ ತೆರೆದುಕೊಳ್ಳಲಿದೆ. ಹಾಗಾಗಿ ಆಂಡ್ರಾಯ್ಡ್  v2.19.134 ಮತ್ತು ಇದಕ್ಕಿಂತ ಹಿಂದಿನ ಆವೃತ್ತಿ ಹಾಗೂ ಐಫೋನ್‌ಗಳಲ್ಲಿ ಐಒಎಸ್‌ v2.19.51 ಮತ್ತು ಹಿಂದಿನ ಆವೃತ್ತಿ, ವಿಂಡೋಸ್‌ ಫೋನ್‌ಗಳಲ್ಲಿ v2.18.348 ಮತ್ತು ಹಿಂದಿನದು, ಟೈಜೆನ್‌ v2.18.15 ಮತ್ತು ಹಿಂದಿನ ಆವೃತ್ತಿಯ ವಾಟ್ಸ್‌ಆ್ಯಪ್‌ ಮೆಸೆಂಜರ್‌ ಅಪ್ಲಿಕೇಷನ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ಈ ತಿಂಗಳ ಆರಂಭದಲ್ಲಿಯೇ ಈ ದೋಷವನ್ನು ವಾಟ್ಸ್‌ಆ್ಯಪ್‌ ಪತ್ತೆ ಹಚ್ಚಿತ್ತು. ಭದ್ರತೆಯನ್ನು ಬಲ‍ಪಡಿಸುವ ಉದ್ದೇಶದಿಂದ ಆ್ಯಪ್‌ ಅನ್ನು ಅಪ್‌ಡೇಟ್‌ ಮಾಡಿದೆ.

ಪ್ರ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا