Urdu   /   English   /   Nawayathi

ನಾನೇನೂ ತಪ್ಪು ಮಾಡಿಲ್ಲ, ಕ್ಷಮೆ ಯಾಚಿಸುವುದಿಲ್ಲ: ಬಂಗಾಳ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ

share with us

ಕೋಲ್ಕತ್ತಾ: 15 ಮೇ (ಫಿಕ್ರೋಖಬರ್ ಸುದ್ದಿ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಿರುಚಿದ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಬಿಜೆಪಿ ಯುವಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಜೈಲಿನಿಂದ ಬಿಡುಗಡೆಗೊಂಡ ನಂತರ ತಾನು  ಯಾವುದೇ ಕಾರಣಕ್ಕೆ ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. "ನನಗೆ ಯಾವ ಕಾರಣಕ್ಕೂ ನನ್ನ ಕೆಲಸದ ಬಗ್ಗೆ ವಿಷಾದವಿಲ್ಲ. ನಾನೇಕೆ ಕ್ಷಮೆ ಯಾಚಿಸಬೇಕು? ನಾನು ಕ್ಷಮೆ ಕೇಳುವುದಿಲ್ಲ": ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಟಿಯ ವೇಳೆ ಶರ್ಮಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಐದು ದಿನಗಳ ಬಳಿಕ ಅವರು ಅಲಿಪೋರ್ ಜೈಲಿನಿಂದ ಬುಧವಾರ ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತನಗೆ ಜೈಲಿನಲ್ಲಿ ಕಿರುಕುಳ ನೀಡಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ." ನಾನು ಜೈಲಿನಲ್ಲಿ ಚಿತ್ರಹಿಂಸೆಗೊಳಗಾಗಿದ್ದೆ, ಜೈಲರ್ ನನ್ನನ್ನು ಅತ್ಯಂತ ಕನಿಷ್ಟ ಸೌಲಭ್ಯವಿದ್ದ ಜೈಲು ಕೊಟಡಿಯಲ್ಲಿಟ್ಟಿದ್ದರು. ನಾನು ಅಂತಹಾ ಜೈಲಿನಲ್ಲಿರುವಂತ ಅಪರಾಧವನ್ನೇನೂ ಮಾಡಿಲ್ಲ ಎಂಬುದಾಗಿ ಅವರಿಗೆ ನಾನು ವೊವರಿಸಿದ್ದೆ. ಅವರು ನನ್ನೊಡನೆ ಬಹಳ ಅಸಭ್ಯವಾಗಿ ವರ್ತಿಸಿದ್ದರು. ಅಲ್ಲಿನ ನನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು" ದಕ್ಷಿಣ ಕೋಲ್ಕತ್ತಾದ ಜೈಲಿನಿಂದ ಶರ್ಮಾ ಬಿಡುಗಡೆಯಾಗುವ ವೇಳೆ ಅವರ ತಾಯಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅವರ ಆಗ್ಮನದ ನಿರೀಕ್ಷೆಯಲ್ಲಿದ್ದರು. "ನಾನು ಹಾಗೂ ನನ್ನ ಕುಟುಂಬದವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಈ ನನ್ನ ಹೋರಾಟ ವ್ಯರ್ಥವಾಗಿಲ್ಲ ಎಂದು ನಾನು ಭಾವಿಸುತ್ತೇನೆ"  ಇದೇ ವೇಳೆ ಆಕೆಯ ಸೋದರ ರಾಜೀವ್ ಶರ್ಮಾ ಮಾತನಾಡಿ ಜೈಲು ಅಧಿಕಾರಿಗಳು ತಮ್ಮ ಸೋದರಿಯನ್ನು ಮಂಗಳವಾರವೇ ಬಿಡುಗಡೆಗೊಳಿಸಲ್ದೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

"ನಾವು ನಿನ್ನೆ ಜೈಲೆಗೆ ತೆರಳಿದಾಗ ಅಧಿಕಾರಿಗಳು ಆದೇಶದ ಪ್ರತಿ ನಮಗಿನ್ನೂ ತಲುಪಿಲ್ಲ, ಆ ಪ್ರತಿ ತಲುಪಿದ ಬಳಿಕವೇ ನಾವು ಕ್ರಮ ತೆಗೆದುಕೊಳ್ಳಬೇಕು ಎಂದರು.ನಾನು ದೆಹಲಿಯಲ್ಲಿದ್ದೇನೆ ಮತ್ತು ಆದೇಶದ ದಾಕಲೆಯನ್ನು ಪಡೆದುಕೊಳ್ಲಲು ಆದ ವಿಳಂಬವನ್ನೇ ನೆಪವಾಗಿಟ್ಟು ಜೈಲಿನ ಅಧಿಕಾರಿಗಳು ಅವರನ್ನು ಒಂದಿ ದಿನ ತಡವಾಗಿ ಬಿಡುಗಡೆಗೊಳಿಸಿದ್ದಾರೆ. ಹೀಗೆ  ತಕ್ಷಣವೇ ಬಿಡುಗಡೆ, ಮಾಡಬೇಕೆಂಬ ಸುಪ್ರೀಂ ಆದೇಶವನ್ನು ಜೈಲಿನ ಅಧಿಕಾರಿಗಳು ಅನುಸರಿಸಿಲ್ಲ" ಅವರು ಹೇಳೀದ್ದಾರೆ. ಇತ್ತ ಸುಪ್ರೀಂ ಕೋರ್ಟ್ ತಕ್ಷಣ ಶರ್ಮಾ ಅವರನ್ನು ಬಿಡುಗಡೆ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕಾಗುತ್ತದೆಎಂದು ಎಚ್ಚರಿಸಿದ ನಂತರ ಬುಧವಾರ ಬೆಳಿಗ್ಗೆ ಅವರ ಬಿಡುಗಡೆಯಾಗಿದೆ. ನ್ಯೂಯಾರ್ಕ್ ನಲ್ಲಿನ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ  ಅವರು ಮಾಡಿಕೊಂಡಿದ್ದ  ವಿಶೇಷ ಕೇಶ್ವಿನ್ಯಾಸದ ಚಿತ್ರವೊಂದಕ್ಕೆ ಪ್ರಿಯಾಂಕಾ ಬದಲಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮುಖ ಹಾಕಿ ತಿರುಚಿದ ಫೋಟೀಓವನ್ನು ಶರ್ಮಾ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا