Urdu   /   English   /   Nawayathi

ನೀರಿಲ್ಲದೆ ಎಂಸಿಎಫ್ ಶಟ್‌ಡೌನ್

share with us

ಮಂಗಳೂರು: 14 ಮೇ (ಫಿಕ್ರೋಖಬರ್ ಸುದ್ದಿ) ನೀರಿನ ಕೊರತೆಯಿಂದ ಕಂಗೆಟ್ಟಿರುವ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಮುಂದಾಗಿದೆ. ವಾರ್ಷಿಕ ನಿರ್ವಹಣೆಗಾಗಿ ಮಾರ್ಚ್‌ನಿಂದ ಸುಮಾರು 40 ದಿನಗಳ ಕಾಲ ಶಟ್‌ಡೌನ್ ಆಗಿದ್ದ ಮಂಗಳೂರು ಕೆಮಿಕಲ್ ಫರ್ಟಿಲೈಸರ್ ಕಂಪನಿ ಒಂದೇ ತಿಂಗಳಲ್ಲಿ ಮತ್ತೆ ನೀರಿಲ್ಲದ ಕಾರಣದಿಂದ ಮೇ.14 ರ ಬೆಳಗ್ಗೆಯಿಂದಲೇ ಸ್ಥಗಿತಗೊಳ್ಳಲಿದೆ. ನೀರಿನ ಲಭ್ಯತೆ ಸರಿಯಾಗಿ ಆಗುವ ವರೆಗೂ ಈ ಶಟ್ ಡೌನ್ ಮುಂದುವರಿಯಲಿದೆ. ಎಂಸಿಎಫ್‌ನ ಪ್ರಮುಖ ಉತ್ಪನ್ನ ಯೂರಿಯಾ. ಕೇಂದ್ರ ರಸಗೊಬ್ಬರ ಸಚಿವಾಲಯ ಎಂಸಿಎಫ್‌ನಿಂದ ಖರೀದಿಸಿದ ಯೂರಿಯಾ ವನ್ನು ವಿವಿಧ ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ಅದರಂತೆ ರಾಜ್ಯದ ಬಹುತೇಕ ಕೃಷಿಕರಿಗೆ ಎಂಸಿಎಫ್‌ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ. ಎಂಸಿಎಫ್ ಸರಾಸರಿ ದಿನಕ್ಕೆ 1600 ಟನ್ ಯೂರಿಯಾ ಉತ್ಪಾದನೆ ಮಾಡುತ್ತದೆ. 800 ಟನ್‌ನಷ್ಟು ಡಿಎಪಿ ಗೊಬ್ಬರ ಉತ್ಪಾದನೆ ಮಾಡುತ್ತದೆ. 700 ಟನ್‌ನಷ್ಟು ಅಮೋನಿಯಾ ಉತ್ಪಾದನೆಯಾಗುತ್ತದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا