Urdu   /   English   /   Nawayathi

ಕಾರ್​ಲ್ಲಿ ಬರ್ತಾರೆ ಹೈಫೈ ಕಳ್ಳರು... ಬೆಂಗಳೂರಿಗರೇ ಹುಷಾರ್​!

share with us

ಬೆಂಗಳೂರು: 14 ಮೇ (ಫಿಕ್ರೋಖಬರ್ ಸುದ್ದಿ) ಸಿಲಿಕಾನ್ ಸಿಟಿಯಲ್ಲಿ ಹೈಫೈ ಕಳ್ಳರ ಕಾಟ ಹೆಚ್ಚಾಗಿದೆ. ದೊಡ್ಡ ವ್ಯಕ್ತಿಗಳಂತೆ ಕಾರ್​ನಲ್ಲಿ ಬರುವ ಕಳ್ಳರು ಕತ್ತಿನಲ್ಲಿರುವ ಚಿನ್ನದ ಸರ ಕದ್ದು ಎಸ್ಕೇಪ್ ಆಗುತ್ತಿದ್ದಾರೆ. ಕಳೆದ ತಿಂಗಳ 26 ರಂದು ಬೆಳಗ್ಗೆ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದು, ಇವರನ್ನು ಹಿಡಿಯಲು ಮುಂದಾಗಿದ್ದ ಮಹಿಳೆಯ ಪತಿಗೆ ಚಾಕುವಿನಿಂದ ಇರಿದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖತರ್ನಾಕ್​ ಕೆಲಸ ಮಾಡುತ್ತಿರುವ ಖದೀಮರು, ತಮ್ಮ ಕೃತ್ಯಕ್ಕೆ ಕಾರ್​ನ್ನು ಬಳಸುತ್ತಿದ್ದಾರೆ. ಬೆಳಗ್ಗೆ ವಾಕಿಂಗ್​ಗೆ ತೆರಳುವ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದಾರೆ​. ಅಂದು ಬೆಳಗ್ಗೆ ದಂಪತಿ ವಾಕಿಂಗ್​ ಹೋಗುವಾದ ಬಂದ ಈ ಖದೀಮರು ಅವರ ಬಳಿ ಇದ್ದ 1.20 ಲಕ್ಷ ಬೆಲೆಬಾಳುವ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್​ ಆಗಿದ್ದಾರೆ. 
ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا