Urdu   /   English   /   Nawayathi

ಎಎಚ್-64ಇ(1) ಅಪಚೆ ದಾಳಿ ಹೆಲಿಕಾಪ್ಟರ್; ಏನಿದರ ವಿಶೇಷತೆ?

share with us

ನವದೆಹಲಿ: 11 ಮೇ (ಫಿಕ್ರೋಖಬರ್ ಸುದ್ದಿ) 2015 ರಲ್ಲಿ ಭಾರತ ಮತ್ತು ಅಮೆರಿಕಾ ಸರ್ಕಾರ ಮಾಡಿಕೊಂಡ ಹೆಲಿಕಾಪ್ಟರ್ ಖರೀದಿ ಒಪ್ಪಂದದ ಪ್ರಕಾರ ಈ ವರ್ಷ ಜುಲೈಯಲ್ಲಿ ಎಎಚ್-64ಇ (1) ಅಪಚೆ ದಾಳಿ ಹೆಲಿಕಾಪ್ಟರ್ ಭಾರತಕ್ಕೆ ಆಗಮಿಸಲಿದೆ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯ ಭವಿಷ್ಯದ ಅವಶ್ಯಕತೆಗಳಿಗೆ ಸರಿಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಪರ್ವತಮಯ ಭೂಪ್ರದೇಶದಲ್ಲಿ ಗಮನಾರ್ಹವಾದ ಸಾಮರ್ಥ್ಯವನ್ನು ಈ ಯುದ್ಧ ಹೆಲಿಕಾಪ್ಟರ್ ಹೊಂದಿರುತ್ತದೆ. ಹೆಲಿಕಾಪ್ಟರ್ ತನ್ನ ವ್ಯಾಪ್ತಿಯಲ್ಲಿ ನಿಖರ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯ ಯುದ್ಧ ಹೆಲಿಕಾಪ್ಟರ್ ಆಗಿದೆ. ಕಾರ್ಯದಕ್ಷತೆಯಲ್ಲಿ ಮುಂದಿದೆ. ಉದ್ದದ ಶ್ರೇಣಿಯ ಶಸ್ತ್ರಾಸ್ತ್ರಗಳ ನಿಖರತೆ, ಎಲ್ಲಾ ಹವಾ ಮಾನಗಳಲ್ಲಿ ಹೋರಾಟ ನಡೆಸುವ ಶಕ್ತಿ  ಮತ್ತು ವಸ್ತುಗಳ ಪತ್ತೆಯಲ್ಲಿ ಮುಂದಿದೆ. ಸಂಯೋಜಿತ ಸಂವೇದಕಗಳು, ಜಾಲ, ಮತ್ತು ಸಾಂದರ್ಭಿಕ ಜಾಗೃತಿ ಡಿಜಿಟಲ್ ಸಂವಹನ, ನೈಜ ಸಮಯದಲ್ಲಿ ಯುದ್ಧ ರಂಗದಲ್ಲಿ ನಿರ್ವಹಣೆ, ಮತ್ತು ಜಂಟಿ ಕಾರ್ಯಾಚರಣೆ 'ಯುದ್ಧಭೂಮಿಯಲ್ಲಿ ಕಮಾಂಡರ್ ಗಳಿಗೆ ಚಿತ್ರಗಳನ್ನು ಕಳುಹಿಸುವ ಮತ್ತು ಗುರಿ ಸ್ಥಾನಗಳ ಡಿಜಿಟಲ್ ಸಂವಹನ ಮೊದಲಾದ ಸೌಲಭ್ಯಗಳು ಇದರಲ್ಲಿವೆ. ಯುದ್ಧಭೂಮಿಯ ಚಿತ್ರಣವನ್ನು ಸ್ವೀಕರಿಸಿ ಅದನ್ನು ವರ್ಗಾಯಿಸುವ ತಂತ್ರಜ್ಞಾನ ಈ ಹೆಲಿಕಾಪ್ಟರ್ ನಲ್ಲಿ ಇರಲಿದೆ. ಭೂಸೇನಾ ಪಡೆಗೆ ಯುದ್ಧದಲ್ಲಿ ಯಾವುದೇ ಸಂದರ್ಭದಲ್ಲಿಯಾದರೂ ಜಂಟಿ ಕಾರ್ಯಾಚರಣೆಗೆ ಹೆಲಿಕಾಪ್ಟರ್ ನೆರವಾಗಲಿದೆ. ಭಾರತದ ರಕ್ಷಣಾ ಸಚಿವಾಲಯ 2017ರಲ್ಲಿ ಭಾರತೀಯ ಸೇನೆಗೆ ಬೋಯಿಂಗ್ ಕಂಪೆನಿಯಿಂದ 4 ಸಾವಿರದ 168 ಕೋಟಿ ರೂಪಾಯಿ ವೆಚ್ಚದಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ 6 ಅಪಚೆ ಹೆಲಿಕಾಪ್ಟರ್ ಗಳ ಖರೀದಿಗೆ ಅನುಮೋದನೆ ನೀಡಿತ್ತು. ಈ ಯುದ್ಧ ಹೆಲಿಕಾಪ್ಟರ್ ನ ಮುಖ್ಯ ಉಪಕರಣವನ್ನು ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ ತಯಾರಿಸಿದ್ದು ಬೋಯಿಂಗ್ ಮತ್ತು ಹೈದರಾಬಾದ್ ನಲ್ಲಿರುವ ಟಾಟಾ ಅಡ್ವಾನ್ಸ್ ಡ್ ಸಿಸ್ಟಮ್ಸ್ ನ ಜಂಟಿಕಾರ್ಯವಾಗಿದೆ.

Indian Air Force✔@IAF_MCC

 · 5h

Replying to @IAF_MCC

The addition of AH-64 E (I) helicopter is a significant step towards modernisation of IAF’s helicopter fleet. The helicopter has been customized to suit IAF’s future requirements and would have significant capability in mountainous terrain.

View image on TwitterView image on Twitter

Indian Air Force✔@IAF_MCC

The first batch of the helicopters is scheduled to be shipped to India by July this year.
Selected aircrew & ground crew have undergone training at the training facilities at US Army base Fort Rucker, Alabama.
Read more on http://fb.com/indianairforce  pic.twitter.com/pHRArBCjbz

2,087

10:13 AM - May 11, 2019

Twitter Ads info and privacy

View image on Twitter

333 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا