Urdu   /   English   /   Nawayathi

2 ತಿಂಗಳಲ್ಲಿ ₹ 3,622 ಕೋಟಿ ಮೊತ್ತದ ಚುನಾವಣಾ ಬಾಂಡ್​ ಮಾರಿದ ಎಸ್​ಬಿಐ

share with us

ನವದೆಹಲಿ: 11 ಮೇ (ಫಿಕ್ರೋಖಬರ್ ಸುದ್ದಿ) ಭಾರತೀಯ ಸ್ಟೇಟ್​ ಬ್ಯಾಂಕ್ (ಎಸ್​ಬಿಐ) ಮಾರ್ಚ್​ ಮತ್ತು ಏಪ್ರಿಲ್ ತಿಂಗಳ ಅವಧಿಯಲ್ಲಿ 3,622 ಕೋಟಿ ಮೊತ್ತದ ಚುನಾವಣಾ ಬಾಂಡ್​ಗಳನ್ನು ಮಾರಾಟ ಮಾಡಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಬಹಿರಂಗವಾಗಿದೆ. ಪುಣೆಯ ವಿಹಾರ್ ದುರ್ವೆ ಎಂಬುವವರು ಆರ್​ಟಿಐ ಮೂಲಕ ಪಡೆದ ದಾಖಲೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಮಾರ್ಚ್​ನಲ್ಲಿ 1,365 ಕೋಟಿ ಮೊತ್ತದ ಚುನಾವಣೆ ಬಾಂಡ್​ಗಳು ಮಾರಾಟವಾಗಿವೆ. ಏಪ್ರಿಲ್​ನಲ್ಲಿ ಇವುಗಳ ಮಾರಾಟ ಶೇ 65.21ರಷ್ಟು ಹೆಚ್ಚಳವಾಗಿದ್ದು, 2,256.37 ಕೋಟಿ ಮೊತ್ತದ ಬಾಂಡ್​ಗಳು ಮಾರಾಟವಾಗಿವೆ ಎಂದು ಎಸ್​ಬಿಐ ಮಾಹಿತಿ ನೀಡಿದೆ. ಏಪ್ರಿಲ್​ನಲ್ಲಿ ಹೆಚ್ಚಿನ ಬಾಂಡ್​ಗಳು ಮುಂಬೈನಲ್ಲಿ ಮಾರಾಟವಾಗಿವೆ. ಮುಂಬೈನಲ್ಲಿ 694 ಕೋಟಿ, ಕೋಲ್ಕತ್ತಾದಲ್ಲಿ 417.13 ಕೋಟಿ, ದೆಹಲಿಯಲ್ಲಿ 408.62 ಕೋಟಿ ಹಾಗೂ 338.07 ಕೋಟಿ ಮೊತ್ತದ ಬಾಂಡ್​ಗಳು ಹೈದರಾಬಾದ್ ಸೇರಿದಂತೆ ಇತರೆ ನಗರಗಳಲ್ಲಿ ಮಾರಾಟವಾಗಿವೆ. ಚುನಾವಣೆ ಬಾಂಡ್​ ಯೋಜನೆ 2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಇದನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಭಾರತದ ಪೌರರಿಗೆ ಮಾತ್ರವೇ ಈ ಬಾಂಡ್ ಖರೀದಿ ಮಾಡಲು ಅವಕಾಶವಿದೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮಾಹಿತಿ ನೀಡಿತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا