Urdu   /   English   /   Nawayathi

ಆಸ್ಟ್ರೇಲಿಯಾ: ಪ್ರಜ್ಞೆ ಇಲ್ಲದೆ 40 ನಿಮಿಷ ವಿಮಾನ ಹಾರಾಟ ನಡೆಸಿದ ಪೈಲಟ್!

share with us

ಕ್ಯಾನ್ಬೆರಾ: 11 ಮೇ (ಫಿಕ್ರೋಖಬರ್ ಸುದ್ದಿ) ತರಬೇತಿ ನಿರತ ಪೈಲಟ್ ವೊಬ್ಬರು ಬೆಳಗಿನ ತಿಂಡಿ ತಿನ್ನದೇ ವಿಮಾನ ಏರಿದ್ದು, ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಪ್ರಜ್ಞೆ ತಪ್ಪಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲೇ ಸುಮಾರು 40 ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿದ ಆಘಾತಕಾರಿ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಮಾರ್ಚ್ 9ರಂದು ಅಡಿಲೇಡ್ ವಿಮಾನ ನಿಲ್ದಾಣದ ಮೇಲೆ ನಡೆದ ಈ ಗಂಭೀರ ಘಟನೆಯ ಕುರಿತು ಆಸ್ಟ್ರೇಲಿಯಾ ಸಾರಿಗೆ ಸುರಕ್ಷತಾ ಮಂಡಳಿ(ಎಟಿಎಸ್ ಬಿ) ವರದಿ ಬಿಡುಗಡೆ ಮಾಡಿದೆ. ಈ ತರಬೇತಿ ನಿರತ ವಿಮಾನ ವಿಮಾನ ತರಬೇತಿ ಶಾಲೆ ಅಡಿಲೇಡ್ ಸೇರಿದ್ದು, ಅಂದು ಪೈಲಟ್ ಸರಿಯಾಗಿ ನಿದ್ದೆ ಮಾಡಿರಲಿಲ್ಲ ಮತ್ತು ಬೆಳಗ್ಗೆ ತಿಂಡಿ ತಿನ್ನದೆ ಕೇವಲ ಚಾಕಲೇಟ್ ಮಾತ್ರಿ ಸೇವಿಸಿದ್ದರು ಎಂದು ಎಟಿಎಸ್ ಬಿ ತಿಳಿಸಿದೆ. ಈ ಘಟನೆಯು ಸಂಭವಿಸಿದಾಗ ಪೈಲಟ್ ದಕ್ಷಿಣ ಆಸ್ಟ್ರೇಲಿಯಾದ ಪೋರ್ಟ್ ಅಗಸ್ಟಾ ವಿಮಾನ ನಿಲ್ದಾಣದಿಂದ ಅಡಿಲೇಡ್ ಹೊರ ವಲಯದಲ್ಲಿರುವ ಪ್ಯಾರಾಫೀಲ್ಡ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಹಾರಿಸುತ್ತಿದ್ದರು ಎಂದು ವರದಿ ತಿಳಿಸಿದೆ. ವಿಮಾನ 5,500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವೇಳೆ ಪೈಲಟ್ ಗೆ ತೀವ್ರ ತಲೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಆಟೋಪೈಲಟ್ ಆನ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ವರದಿ ಮಾಡಿದೆ. ಡೈಮಂಡ್ ಡಿಎ40 ಎಂಬ ವಿಮಾನ ಯಾವುದೇ ಅನುಮತಿ ಪಡೆಯದೇ ಮತ್ತು ಮುನ್ಸೂಚನೆ ನೀಡದೆ ಅಡಿಲೇಡ್ ನಿಯಂತ್ರಿತ ವಾಯು ಪ್ರದೇಶ ಪ್ರವೇಶಿಸಿದೆ. ವಾಯುಸಂಚಾರ ನಿಯಂತ್ರಕರು ವಿಮಾನದ ಪೈಲಟ್ ಸಂಪರ್ಕಿಸಲು ಹಲವು ಬಾರಿ ಯತ್ನಿಸಿದ್ದಾರೆ. ಆದರೆ ಪೈಲಟ್ ಪ್ರಜ್ಞೆ ತಪ್ಪಿದ್ದರು ಎಂದು ಎಟಿಎಸ್ ಬಿ ವಿವರಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا