Urdu   /   English   /   Nawayathi

ಬಿಣಗಾದಿಂದ ಕಾರವಾರದವರೆಗೆ ಸುರಂಗದಲ್ಲಿ ರಾಷ್ಟ್ರೀಯ ಹೆದ್ದಾರಿ

share with us

ಕಾರವಾರ: 07 ಮೇ (ಫಿಕ್ರೋಖಬರ್ ಸುದ್ದಿ) ಕರ್ನಾಟಕದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಹೆದ್ದಾರಿ ಸುರಂಗ ಮಾರ್ಗ ಕಾರವಾರದ ಬಿಣಗಾದಲ್ಲಿ ನಡೆಯುತ್ತಿದ್ದು, ಕಾಮಗಾರಿ ಕೆಲಸ ಅಂತಿಮ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಯಲ್ಲಿ ಬಿಣಗಾದಿಂದ ಕಾರವಾರದವರೆಗೆ ಸುರಂಗದ ಮಾರ್ಗ ಮಾಡುತ್ತಿದ್ದು, ಕಾರವಾರದ ಜಿಲ್ಲಾಧಿಕಾರಿಗಳ ನಿವಾಸದ ಬಳಿ ಇರುವ ಗುಡ್ಡದಲ್ಲಿ ಈ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಮೊದಲು ಈ ರಸ್ತೆ ಬಿಣಗಾದಿಂದ ಕಾರವಾರದವರೆಗೆ ಸುಮಾರು 4.5 ಕಿಮೀ ಅಂತರವಿತ್ತು ಈಗ ಇದು ಕೇವಲ 1 ಕಿಮೀಗೆ ಇಳಿದಿದೆ. ಒಟ್ಟಾರೆ ಸುರಂಗದ ಉದ್ದ 1144 ಮೀಟರ್ ಉದ್ದವಾಗಿದ್ದು ಇದನ್ನು ಎರಡು ಹಂತದಲ್ಲಿ ಅಂದರೆ ಒಂದು 594 ಮೀ ಹಾಗೂ ಮತ್ತೊಂದು 550ಮೀ ಉದ್ದ ಮಾಡಲಾಗುತ್ತಿದೆ. ಒಂದು ಸುಂರಗ ಬಿಣಗಾದಿಂದ ಅಲಿಗದ್ದಾದವರೆಗೆ ಮತ್ತೊಂದು ಸುರಂಗ ಅಲಿಗದ್ದಾದಿಂದ ಕಾರವಾರದ ಲಂಡನ್ ಬ್ರಿಡ್ಜ್‍ವರೆಗೆ ಮಾಡಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا