Urdu   /   English   /   Nawayathi

’50 ಕೋಟಿ ಕೊಟ್ರೆ ಮೋದಿನ ಎತ್ತಿಬಿಡ್ತೀನಿ’ ಎಂದ ತೇಜ್ ಬಹದ್ದೂರ್

share with us

ನವದೆಹಲಿ: 07 ಮೇ (ಫಿಕ್ರೋಖಬರ್ ಸುದ್ದಿ) ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಅನರ್ಹಗೊಂಡ ನಂತರ ಕುಪಿತಗೊಂಡಿರುವ ವಜಾಗೊಂಡ ಯೋಧ ತೇಜ್ ಬಹದ್ದೂರ್ ಯಾದವ್ ನೀಡಿರುವ ಹೇಳಿಕೆ ಈಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ನನಗೆ 50 ಕೋಟಿ ಕೊಟ್ಟರೆ ಮೋದಿಯನ್ನು ಕೊಲ್ಲುತ್ತೇನೆ ಎಂದು ತೇಜ್ ಬಹದ್ದೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕುರಿತ ವಿಡಿಯೋ ವೈರಲ್ ಆಗಿದೆ. ಈ ಹೇಳಿಕೆ ಬಿಜೆಪಿ ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದೆ. ಆದರೆ ವಿಡಿಯೋದಲ್ಲಿ ಸ್ಪಷ್ಟತೆ ಇಲ್ಲ ಮತ್ತು ಇದರಲ್ಲಿನ ವ್ಯಕ್ತಿ ತೇಜ್ ಬಹದ್ದೂರ್ ಹೌದೋ, ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಸೇನೆಯಿಂದ ಅಮಾನತುಗೊಂಡಿರುವ ತೇಜ್ ಬಹದ್ದೂರ್ ಪ್ರಧಾನಿ ಮೋದಿ ವಿರುದ್ಧವಾಗಿ ವಾರಣಾಸಿ ಕ್ಷೇತ್ರದಿಂದ ಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸೆಣಸುತ್ತಿದ್ದರು. ಆದರೆ ಲೋಪ ದೋಷ ಹಿನ್ನೆಲೆಯಲ್ಲಿ ತೇಜ್ ಬಹದ್ದೂರ್ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಸುಪ್ರೀಂಕೋರ್ಟ್ಗೆ ದೂರು ಸಲ್ಲಿಸಿದ್ದಾರೆ. ಭಾರತೀಯ ಸೇನೆಯ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ತೇಜ್ ಬಹದ್ದೂರ್ ವೈರಲ್ ಮಾಡಿದ ವೀಡಿಯೋ ದೇಶಾದ್ಯಂತ ಭಾರೀ ವಿವಾದ ಮತ್ತು ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ನಂತರ ಸೇನಾಧಿಕಾರಿಗಳ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದ ತೇಜ್ ಯಾದವ್ ತನ್ನ ಉನ್ನತಾಧಿಕಾರಿಗಳ ವಿರುದ್ಧ ತಿರುಗಿ ಬಿದ್ದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಕಾರಣಗಳಿಂದ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا