Urdu   /   English   /   Nawayathi

ಆರು ತಿಂಗಳ ಜಾಮೀನು ಅವಧಿ ಮುಕ್ತಾಯ, ಶರೀಫ್ ಮತ್ತೆ ಜೈಲಿಗೆ

share with us

ಪಾಕಿಸ್ತಾನ: 07 ಮೇ (ಫಿಕ್ರೋಖಬರ್ ಸುದ್ದಿ) ಭ್ರಷ್ಟಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಆರು ತಿಂಗಳ ಜಾಮೀನು ಅವಧಿ ಮುಕ್ತಾಯಗೊಂಡಿದ್ದು, ಮತ್ತೆ ಕೊಟ್ ಲಾಕ್ ಪತ್ ಜೈಲು ಸೇರಲಿದ್ದಾರೆ. ಮೂರು ಭಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಶರೀಪ್ ಇಂದು ಸಂಜೆ ಇಫ್ತಾರ್ ಮುಗಿಸಿ ಸ್ವಯಂ ಪ್ರೇರಿತವಾಗಿ ಜೈಲಿಗೆ ಶರಣಾಗುವ ಸಾಧ್ಯತೆ ಇದೆ. ಅಲ್ - ಅಜಿಜಿಯಾ ಮಿಲ್ಸ್  ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರುವ 69 ವರ್ಷದ ನವಾಜ್ ಶರೀಪ್ ಅವರಿಗೆ  ಉನ್ನತ ನ್ಯಾಯಾಲಯದಿಂದ ಆರು ತಿಂಗಳ ಕಾಲ ಜಾಮೀನು ನೀಡಲಾಗಿತ್ತು. ಮಾನಸಿಕ ಒತ್ತಡ ಹಾಗೂ ತೀವ್ರ ಆತಂಕದಲ್ಲಿದ್ದು, ಶಾಶ್ವತ ಜಾಮೀನು ನೀಡಬೇಕೆಂದು ಕೋರಿ ಏಪ್ರಿಲ್ 27 ರಂದು ನವಾಜ್ ಶರೀಫ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ,ವೈದ್ಯಕೀಯ  ಚಿಕಿತ್ಸೆ ಆಧಾರದ ಮೇಲೆ ಜಾಮೀನು ವಿಸ್ತರಣೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಅಲ್ಲದೇ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಹ ನ್ಯಾಯಾಲಯ ತಿರಸ್ಕರಿಸಿತ್ತು. ಪಿಎಂಎನ್ -ಎನ್ ಕಾರ್ಯಕರ್ತರ ಮೆರವಣಿಗೆಯೊಂದಿಗೆ ನವಾಜ್ ಶರೀಫ್ ಇಂದು ಲಾಹೋರ್ ನಲ್ಲಿರುವ  ಕೊಟ್ ಲಾಕ್ ಪಾತ್ ಜೈಲು  ಸೇರಲಿದ್ದಾರೆ. ಶರೀಫ್ ನಿವಾಸದಿಂದ  ಜೈಲಿನವರೆಗೂ ಮೆರವಣಿಗೆ ಸಾಗಲಿದೆ ಎಂದು ಪಿಎಂಎಲ್ -ಎನ್ ವಕ್ತಾರ ಮಾರಿಯಂ ಔರಂಗಜೇಬ್ ಪಿಟಿಐ ಸುದ್ದಿಸಂಸ್ಥಗೆ ತಿಳಿಸಿದ್ದಾರೆ.

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا