Urdu   /   English   /   Nawayathi

ನೌಕಾಪಡೆಗೆ ಅತ್ಯಂತ ಪ್ರಬಲ ಅಸ್ತ್ರ ‘ಐಎನ್‍ಎಸ್ ವೇಲಾ’ ಸಬ್‍ಮರಿನ್‍ ಯಶಸ್ವಿ ಪರೀಕ್ಷೆ

share with us

ಮುಂಬೈ: 06 ಮೇ (ಫಿಕ್ರೋಖಬರ್ ಸುದ್ದಿ) ಭಾರತೀಯ ನೌಕಾಪಡೆಗೆ ಅತ್ಯಂತ ಪ್ರಬಲ ಅಸ್ತ್ರವಾಗಲಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿ ಶ್ರೇಣಿಯ ಐಎನ್‍ಎಸ್ ವೇಲಾ ಸಬ್‍ಮರಿನ್‍ನ್ನು ಇಂದು ಮುಂಬೈ ಸಾಗರ ಪ್ರದೇಶದಲ್ಲಿ ಯಶಸ್ವಿ ಪರೀಕ್ಷೆ ನಡೆಸಲಾಯಿತು. ಮುಂಬೈನ ಮಜಗಾಂವ್ ಡಾಕ್ ಯಾರ್ಡ್ ಲಿಮಿಟೆಡ್ (ಎಂಡಿಎಲ್) ಬಂದರು ಕಟ್ಟೆಯಿಂದ ಇಂದು ಬೆಳಗ್ಗೆ ಈ ಸಬ್‍ಮರಿನ್‍ನ್ನು ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಲಾಯಿತು ಎಂದು ನೌಕಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಸ್ಕಾರ್ಪಿಯನ್ ಶ್ರೇಣಿಯ ಸಬ್‍ಮರಿನ್‍ಗಳಲ್ಲಿ ನಾಲ್ಕನೇ ಜಲಾಂತರ್ಗಾಮಿಯಾಗಿದೆ. ಈ ಹಿಂದೆ ನಿರ್ಮಾಣವಾಗಿರುವ ಇತರ ಸಬ್‍ಮರಿನ್‍ಗಳನ್ನು ಈಗಾಗಲೇ ಪರೀಕ್ಷೆಗೊಳಪಡಿಸಲಾಗಿದ್ದು, ಸುಧಾರಿತ ಹಂತದಲ್ಲಿದೆ.  ಐಎನ್‍ಎಸ್ ವೇಲಾ ಅಗಾಧ ಸಾಮಥ್ರ್ಯದ ಸಬ್‍ಮರಿನ್ ಸಮುದ್ರ ಮೇಲ್ಭಾಗ ಮತ್ತು ಸಾಗರದಾಳದಲ್ಲಿ ವೈರಿಗಳ ನಿಗ್ರಹದಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಶತ್ರು ಜಲಾಂತರ್ಗಾಮಿಗಳು ಮತ್ತು ಅವುಗಳಿಂದ ಹಾರಿ ಬರುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮಥ್ರ್ಯವನ್ನು ಇದು ಹೊಂದಿದೆ. ಸಾಗರ ಗರ್ಭದಲ್ಲಿ ಬೇಹುಗಾರಿಕೆ , ಬಾಂಬ್ ಪತ್ತೆ ಮಾಡುವಿಕೆ ಮತ್ತು ವೈರಿ ನೌಕೆಗಳ ಚಲನವಲನಗಳ ಮೇಲೆ ನಿಗಾ ಇಡುವ ಬಹು ಕಾರ್ಯಗಳನ್ನು ಐಎನ್‍ಎಸ್ ವೇಲಾ ಸಮರ್ಥವಾಗಿ ನಿರ್ವಹಿಸಲಿದೆ. ಇನ್ನು ಎರಡು ಹಂತಗಳಲ್ಲಿ ಈ ಜಲಾಂತರ್ಗಾಮಿಯನ್ನು ಪರೀಕ್ಷೆಗೊಳಪಡಿಸಿದ ನಂತರ ಮತ್ತಷ್ಟು ಸುಧಾರಣೆಗಳೊಂದಿಗೆ ಇದನ್ನು ಭಾರತೀಯ ನೌಕಾಪಡೆ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا