Urdu   /   English   /   Nawayathi

ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿ

share with us

ಭುವನೇಶ್ವರ: 04 ಮೇ (ಫಿಕ್ರೋಖಬರ್ ಸುದ್ದಿ) ಒಡಿಶಾ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಇಲ್ಲಿನ ವಿಶೇಷ ಪರಿಹಾರ ಆಯುಕ್ತ ವಿಷ್ಣುಪಾದ ಸೇಥಿ, ಮೂವರ ಸಾವನ್ನು ದೃಢಿಕರಿಸಿದ್ದಾರೆ. ಒಡಿಶಾದ 12 ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಗೊಂಡಿದ್ದು, ಒಂದೇ ದಿನದಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಒಡಿಶಾದ ಪುರಿಗೆ 220 ಕಿ.ಮೀ ವೇಗದಲ್ಲಿ ಪ್ರವೇಶಿಸಿದ ಚಂಡಮಾರುತವು ಹಲವು ಅವಾಂತರ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ6) ಒಡಿಶಾಕ್ಕೆ ಭೇಟಿ ನೀಡಿ ಫೋನಿ ಚಂಡಮಾರುತದ ಪರಿಣಾಮಗಳನ್ನು ವೀಕ್ಷಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ. 

Chowkidar Narendra Modi@narendramodi

Day after tomorrow, on the 6th morning, I will be going to Odisha to take stock of the situation arising in the wake of Cyclone Fani.

27.1K

9:57 AM - May 4, 2019

Twitter Ads info and privacy

6,084 people are talking about this

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا