Urdu   /   English   /   Nawayathi

“ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರು ಬಿಟ್ಟಿದ್ದು, ಈ ವರೆಗೆ ನಾನು ಯಾವುದನ್ನು ಬಯಸಿ ಪಡೆದಿಲ್ಲ”

share with us

ಚಿಕ್ಕಮಗಳೂರು: 04 ಮೇ (ಫಿಕ್ರೋಖಬರ್ ಸುದ್ದಿ) ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಈ ವರೆಗೆ ನಾನು ಯಾವುದನ್ನು ಬಯಸಿ ಪಡೆದಿಲ್ಲ ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ರಾಷ್ಟ್ರದ ನಾಯಕರು ಸುಳಿವು ನೀಡಿದ್ದಾರೆ. ಎಂದು ಈ ಸಂಜೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ತಾವು ಆ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಬಲ್ಲೆ ಎಂದರು. ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ 21 ಕ್ಷೇತ್ರಗಳಿಗೆ ಬಿಜೆಪಿ ನಿಖರವಾಗಿ ಗೆಲ್ಲುವ ಅವಕಾಶವಿದೆ. ಇನ್ನು 5 ಕಡೆ 50-50 ಅವಕಾಶ ಇನ್ನೆರೆಡು ಕಡೆ ಪೈಪೋಟಿಯಿದೆ ಎಂದರು.  ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಿಂತ ರಾಷ್ಟ್ರೀಯ ವಿಚಾರಗಳು ಪ್ರಧಾನಿ ಅಭ್ಯರ್ಥಿ ಕೇಂದ್ರಿತವಾಗಿ ಚುನಾವಣೆ ನಡೆದಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1.75ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿಯ ಬಜೆಟ್‍ನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಉನ್ನತೀಕರಣಕ್ಕೆ ಬಜೆಟ್‍ನಲ್ಲಿ 50ಕೋಟಿ ಅನುದಾನ ಘೋಷಣೆಯಾಗಿದ್ದು ಅದನ್ನು ಅನುಷ್ಠಾನಗೊಳಿಸಲು ಶಾಸಕರಾಗಿ ಪ್ರಯತ್ನ ಮುಂದುವರೆಸಿದ್ದೇನೆ ಇದರಲ್ಲಿ ರಾಜಕೀಯ ಲಾಭದ ಉದ್ದೇಶ ಇಲ್ಲ. 2012ರಲ್ಲಿ ಬಜೆಟ್‍ನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಇದುವರೆಗೆ ಅನುಷ್ಠಾನಗೊಂಡಿಲ್ಲ, ಅದೇ ರೀತಿ ಈ ಬಾರಿ ಬಜೆಟ್‍ನಲ್ಲಿ ಆಗಿರುವ ಯೋಜನೆಗಳು ಅದೇ ಹಾದಿ ಹಿಡಿಯಬಾರದು ಎಂದು ಕೆಲಸ ಆರಂಭಿಸಲು ಶ್ರಮ ವಹಿಸುತ್ತಿರುವುದಾಗಿ ಹೇಳಿದರು.  ಇದನ್ನು ನನ್ನ ರಾಜಕೀಯ ವಿರೋಧಿಗಳು ಟೀಕಿಸಿದರೆ ಏನನ್ನು ಹೇಳಲಿ ಎಂದು ತಿಳಿಸಿದರು.  ಅರಣ್ಯ ಮತ್ತು ಕಂದಾಯ ಜಾಗದ ಗಡಿ ಗುರುತಿಸುವ ಕೆಲಸ ಬಹಳ ವರ್ಷಗಳ ಬೇಡಿಕೆ ಅರಣ್ಯ ರಕ್ಷಿಸುವ ಮತ್ತು ಕಂದಾಯ ಜಾಗವನ್ನು ಸಾಗುವಳಿ ಮಾಡಿಕೊಂಡಿರುವವರಿಗೆ 50,53,57 ಅರ್ಜಿ ಪ್ರಕಾರ ಹಕ್ಕು ಪತ್ರ ನೀಡಬೇಕೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.  ಬಿಜೆಪಿ ಮುಖಂಡರಾದ ತಮ್ಮಯ್ಯ, ರಂಗನಾಥ ಜತೆಯಲ್ಲಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا