Urdu   /   English   /   Nawayathi

ಬರಗಾಲ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸ್ಟುಡೆಂಟ್​ ಹೆಲ್ಪಿಂಗ್​ ಹ್ಯಾಂಡ್ ಸಂಸ್ಥೆ ನೆರವು​.. 2 ಹೊತ್ತು ಊಟ ಫ್ರೀ..

share with us

ಪುಣೆ: 04 ಮೇ (ಫಿಕ್ರೋಖಬರ್ ಸುದ್ದಿ) ಪುಣೆಯ ಸ್ಟುಡೆಂಟ್​ ಹೆಲ್ಪಿಂಗ್​ ಹ್ಯಾಂಡ್​ ಸಂಸ್ಥೆಯು ಬರಗಾಲಕ್ಕೆ ತುತ್ತಾಗಿರುವ ಪ್ರದೇಶದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಎರಡು ಹೊತ್ತಿನ ಊಟವನ್ನ ಉಚಿತವಾಗಿ ನೀಡುತ್ತಿದೆ. ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದ ಸುಮಾರು 2000 ವಿದ್ಯಾರ್ಥಿಗಳು ಸಹಾಯ ಕೋರಿ ಪುಣೆಯ ಸ್ಟುಡೆಂಟ್​ ಹೆಲ್ಪಿಂಗ್​ ಹ್ಯಾಂಡ್​ ಸಂಸ್ಥೆಗೆ ಅರ್ಜಿ ಹಾಕಿದ್ದರು. ಆದರೆ, ಸಂಸ್ಥೆಯ ಆರ್ಥಿಕ ಮಟ್ಟಕ್ಕೆ ಅನುಗುಣವಾಗಿ 600 ವಿದ್ಯಾರ್ಥಿಗಳಿಗೆ ಉಪಹಾರ ಹೊಂದಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಅದ್ಯಕ್ಷ ಕುಲ್​ದೀಪ್​ ಅಂಬೇಡ್ಕರ್.

students

ಸ್ಟುಡೆಂಟ್​ ಹೆಲ್ಪಿಂಗ್​ ಹ್ಯಾಂಡ್​ ಸಂಸ್ಥೆಯ ಅಧ್ಯಕ್ಷ ಕುಲ್​ದೀಪ್​ ಅಂಬೇಡ್ಕರ್ ಅಷ್ಟೇ ಅಲ್ಲ, ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಮನೆಗೆ ತೆರಳದೆ ಬಟ್ಟೆ ಅಂಗಡಿಗಳಲ್ಲಿ ಪಾರ್ಟ್​ಟೈಮ್​ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪೋಷಕರಿಗೆ ನೆರವಾಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا