Urdu   /   English   /   Nawayathi

ಈ ಬಾರಿ ನಾವೇ ಗೆಲ್ಲೋದು.. ಮೋದಿ ಅಧಿಕಾರಕ್ಕೆ ಬರಲ್ಲ: ಇದು ಇವರ ಭವಿಷ್ಯ

share with us

ನವದೆಹಲಿ: 04 ಮೇ (ಫಿಕ್ರೋಖಬರ್ ಸುದ್ದಿ) ವಾಸ್ತವಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾವು ಅಂದರೆ ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂಬುದು ನಮ್ಮ ನಂಬಿಕೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

View image on Twitter

ANI✔@ANI

Sam Pitroda,Congress on if there are contradictions in Opposition: No, don’t think there anything to worry ,they will all come together at the right time , I can assure you. All are clear on the common goal ,they all want democracy, they all want inclusion ,they all want peace.

72

9:27 AM - May 4, 2019

75 people are talking about this

Twitter Ads info and privacy

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಮಾಧ್ಯಮಗಳು ವರದಿ ಮಾಡುವುದಕ್ಕೂ ಮತ್ತು ವಾಸ್ತವಕ್ಕೂ ಅಜಗಜಾಂತರವಿದೆ. ಆ ಬಗ್ಗೆ ಯಾರೂ ವರದಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಬಿಜೆಪಿಯೇತರ ಸರ್ಕಾರ ರಚನೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

View image on Twitter

ANI✔@ANI

Sam Pitroda on Rahul Gandhi citizenship issue: He has been member of parliament for 15 years ,you sat with him in the parliament. You worked with him in parliament.Why did you wake up today with lies?You think people are stupid? Don’t underestimate intelligence of Indian people

356

9:22 AM - May 4, 2019

257 people are talking about this

Twitter Ads info and privacy

ಈ ನಡುವೆ ರಾಹುಲ್​ ಗಾಂಧಿ ಅವರ ಪೌರತ್ವ ವಿಚಾರದ ಬಗ್ಗೆ ಮಾತನಾಡಿದ ಅವರು ರಾಹುಲ್​ 15ವರ್ಷಗಳಿಂದ ಎಂಪಿ ಆಗಿದ್ದಾರೆ. ಸಂಸತ್​ನಲ್ಲಿ ಅವರು ಕುಳಿತು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಇವತ್ತ್ಯಾಕೆ ಈ ವಿಷಯ ಮತ್ತೆ ಪ್ರಸ್ತಾಪವಾಗಿದೆ  ಜನ ಏನು ಮೂರ್ಖರು ಎಂದು ತಿಳಿದುಕೊಂಡಿದ್ದೀರಾ? ಭಾರತೀಯರ ಜಾಣ್ಮೆಯನ್ನ ಅಂಡರ್​ ಎಸ್ಟೀಮೇಟ್​ ಮಾಡಬೇಡಿ ಎಂದು ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ. ಪ್ರತಿಪಕ್ಷಗಳು ಒಗ್ಗಟ್ಟಿನಿಂದಿವೆ ಆ ಬಗ್ಗೆ ಯಾವುದೇ ಆತಂಕ ಬೇಡ. ಸೂಕ್ತ ಸಮಯದಲ್ಲಿ ಅವೆಲ್ಲ ಒಗ್ಗೂಡಲಿವೆ. ನಮ್ಮೆಲ್ಲರ ಹಾಗೂ ಎಲ್ಲ ಪ್ರತಿಪಕ್ಷಗಳ ಗುರಿ ಒಂದೇ, ದೇಶದ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಶಾಂತಿಬೇಕಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا