Urdu   /   English   /   Nawayathi

ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ದರೋಡೆಕೋರರ ಹೆಡೆಮುರಿ ಕಟ್ಟಿದ ಪೊಲೀಸ್ರು

share with us

ಬೆಂಗಳೂರು: 02 ಮೇ (ಫಿಕ್ರೋಖಬರ್ ಸುದ್ದಿ) ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ಅಪಹರಣ ಮಾಡಿ ದರೋಡೆ ನಡೆಸಿದ್ದ ಅಂತಾರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ ಸಿಲಿಕಾನ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋರಮಂಗಲದ ವ್ಯಕ್ತಿವೋರ್ವನ ಮನೆಗೆ ನುಗ್ಗಿ ದರೋಡೆ ಮತ್ತು ಕಿಡ್ನಾಪ್​ ಮಾಡಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಎಪ್ರಿಲ್​ 22 ರ ರಾತ್ರಿ ಕೋರಮಂಗಲದ ಮಧು ಎಂಬುವರ ಮನೆಗೆ ನುಗ್ಗಿ ಆತನನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಅಲ್ಲದೆ, ಮನೆಯಲ್ಲಿದ್ದ ಮೊಬೈಲ್ ಪೋನ್, ಲ್ಯಾಪ್ ಟಾಪ್ ಮತ್ತು ನಗದು ಹಣ ಸುಲಿಗೆ ಮಾಡಿ ನಂತರ ಮಧುವನ್ನ ಕಿಡ್ನಾಪ್ ಮಾಡಿದ್ದರು. ಈ ವೇಳೆ ಕೆ.ಆರ್. ಪುರಂ ಅವಲಹಳ್ಳಿ ಮಾರ್ಗ ಮಧ್ಯೆ ಎಟಿಎಂ ಕಾರ್ಡ್ ನಿಂದ ಹಣ ಡ್ರಾ ಮಾಡುವಂತೆ ಬೆದರಿಸಿದ್ದರು. ಇದಕ್ಕೆ ನಿರಾಕರಿಸಿದ್ದ ಮಧು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮುಳ್ಳು ತಂತಿಯ ಮೇಲೆ ಎಸೆದು ಹೋಗಿದ್ದರು. ನಂತರ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಈ ಘಟನೆ ಕುರಿತು ಮಧು ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಯವರೇ ಕೋರಮಂಗಲ ಠಾಣೆಗೆ ವಿಚಾರ ತಿಳಿಸಿದ್ರು. ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಆಗ್ನೇಯ ವಿಭಾಗ ಡಿಸಿಪಿ ಇಶಾಪಂತ್, ಮಡಿವಾಳ ಎಸಿಪಿ ಸೋಮೆಗೌಡ , ಕೋರಮಂಗಲ ಇನ್ಸಪೆಕ್ಟರ್ ಪ್ರಶಾಂತ್ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ನಿಕುಲ್ ಬಿ.ಎಸ್ ಅಲಿಯಾಸ್ ಬೆನ್ನಿ, ಸ್ಟೀಪನ್ ರಾಜ್ ಅಲಿಯಾಸ್ ಸ್ಟೀವನ್, ವೇಣು ಮಾದವ್‌ ಬಂಧಿತರು. ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆಯಂತೆ. ಈ ಪ್ರಕರಣವನ್ನು ಭೇದಿಸಿಗಾದ ಪ್ರೇಮ್ ಮಹದೇವ್ ಮತ್ತು ಅನುಘೋಷ್, ರಾಹುಲ್ ಎಂಬುವರನ್ನ ಬಂಧಿಸಿದ್ದಾರೆ. ಅರೋಪಿಗಳಿಂದ ಬರೋಬ್ಬರಿ 5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಅರೋಪಿಗಳನ್ನ ವಿಚಾರಣೆ ನಡೆಸಿದಾಗ ಸಾಫ್ಟ್​​ವೇರ್ ಇಂಜಿನಿಯರ್ಸ್​ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಪೊಲೀಸರು ನಗದು, ಕಾರ್ ವಶಪಡಿಸಿಕೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا