Urdu   /   English   /   Nawayathi

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ

share with us

ಬಾಗ್ದಾದ್: 30 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್​ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಹೇಳಿದ್ದಾನೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಇಸಿಸ್, ವಿಡಿಯೋದಲ್ಲಿ ತನ್ನ ಸಂಘಟನೆ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಮೂಲಕ ಹೇಳಿಕೆ ಕೊಡಿಸಿದೆ. ಈ ಹಿಂದೆ ಅಮೆರಿಕ ವಾಯು ಸೇನೆಯ ಡ್ರೋಣ್ ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತಾದರೂ, ಆತ ಸಾವನ್ನಪ್ಪಿಲ್ಲ ಇನ್ನೂ ಜೀವಂತವಾಗಿದ್ದಾನೆ ಎಂದು ತಿಳಿದುಬಂದಿದೆ. ಇಸಿಸ್ ನ ಈ ವಿಡಿಯೋದಲ್ಲಿ ಅರೇಬಿಕ್​ ಭಾಷೆಯಲ್ಲಿ ಮಾತನಾಡಿರುವ ಬಾಗ್ದಾದಿ ಶ್ರೀಲಂಕಾದ ದಾಳಿಯ ಕುರಿತೂ ಉಲ್ಲೇಖಿಸಿದ್ದು, ಸಿರಿಯಾದಲ್ಲಿನ ಇಸಿಸ್ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. 'ಬಘೌಝ್ ನ ಯುದ್ಧ ಇಲ್ಲಿಗೆ ಮುಕ್ತಾಯವಾಗಿದೆ. ಶ್ರೀಲಂಕಾದಲ್ಲಿ ನಡೆಸಿದ ಸರಣಿ ದಾಳಿಯೂ ಈ ಬಘೌಝ್​ ದಾಳಿಗೆ ಪ್ರತಿಕಾರವಾಗಿದೆ.  ಪಶ್ಚಿಮ ರಾಷ್ಟ್ರಗಳ ವಿರುದ್ಧ ಯುದ್ಧ ಸುದೀರ್ಘವಾಗಿದೆ. ಹಾಗೂ ಮೃತಪಟ್ಟಿರುವ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧ ಮುಂದುವರೆಯಲಿದೆ ಎಂದು ಬಾಗ್ದಾದಿ ಎಚ್ಚರಿಸಿದ್ದಾನೆ. ಇನ್ನು ಈ ವಿಡಿಯೋ ಹೊರಬರುತ್ತಿದ್ದಂತೆ ಎಸ್ ಐಟಿ ತಂಡ ಹಾಗೂ ಇರಾಕ್ ನ ತಜ್ಞರ ತಂಡ ಈತ ಬಾಗ್ದಾದಿಯೇ ಅನ್ನೋದನ್ನೂ ಖಚಿತ ಪಡಿಸಿದೆ. 

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا