Urdu   /   English   /   Nawayathi

1 ವೋಟಿಗೆ 25 ಸಾವಿರ, ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಚಿನ್ನದ ಓಲೆ ಜತೆಗೊಂದು ಬೆಳ್ಳಿನಾಣ್ಯ…

share with us

ಶಿವಮೊಗ್ಗ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್‌) ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಮಾಚೇನಹಳ್ಳಿ ಶಿಮುಲ್ ಕಚೇರಿಯಲ್ಲಿ ಮತದಾನ ನಡೆಯುತ್ತಿದೆ. ಆದರೆ, ಬಿಜೆಪಿ, ಜೆಡಿಎಸ್ ಬೆಂಬಲಿತ ಬಣಗಳ ಮಧ್ಯೆ ಪೈಪೋಟಿ ಎದುರಾಗಿದ್ದು, ​ಶಿಮುಲ್ ಚುಕ್ಕಾಣಿ ಹಿಡಿಯಲು ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿ ಒಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದ 14 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ 31 ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದು, 1 ವೋಟಿಗೆ 25 ಸಾವಿರ, ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಚಿನ್ನದ ಒಲೆ, 1 ಬೆಳ್ಳಿ ನಾಣ್ಯ ವಿತರಿಸಲಾಗುತ್ತಿದೆ. ಇಂದು ಬೆಳಗ್ಗೆ 9ರಿಂದ ಆರಂಭವಾಗಿರುವ ಮತದಾನ ಸಂಜೆ 4ರ ವರೆಗೆ ನಡೆಯಲಿದೆ. ಮತದಾನ ಅಂತ್ಯದ ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ರಾತ್ರಿ 8 ಗಂಟೆ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ. 835 ಸದಸ್ಯರ ಮತಗಳಿದ್ದು, ಮತಗಳಿಗಾಗಿ ಮತದಾರರಿಗೆ ಆಮಿಷವೊಡ್ಡಿದ ಬಗ್ಗೆ ವಾಟ್ಸ್​ಆ್ಯಪ್​​ನಲ್ಲಿ ವೈರಲ್ ಆಗಿದೆ. 

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا