Urdu   /   English   /   Nawayathi

4ನೇ ಹಂತದಲ್ಲಿ ಮಧ್ಯಾಹ್ನ 2ರ ವರೆಗೆ ಶೇ 38.63ರಷ್ಟು ಮತದಾನ; ಪಶ್ಚಿಮ ಬಂಗಾಳ ಅಧಿಕ

share with us

ನವದೆಹಲಿ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸೋಮವಾರ 72 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದ ಪ್ರಮಾಣ ಆರು ಗಂಟೆಗಳಲ್ಲಿ ಶೇ 38.63ರಷ್ಟು ದಾಖಲಾಗಿದೆ. ಒಂಬತ್ತು ರಾಜ್ಯಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಕೆಲವು ಕ್ಷೇತ್ರಗಳಲ್ಲಿ ಗಲಾಟೆ, ಇವಿಎಂ ಕಾರ್ಯನಿರ್ವಹಣೆಯಲ್ಲಿ ಅಡಚಣೆ, ಬೆಳಿಗ್ಗೆಯೇ ಮತಗಟ್ಟೆಗೆ ಬಂದ ಗಣ್ಯರು, ಬಿಜೆಪಿ ಪಾಲಿಗೆ ಬಹುಮುಖ್ಯವಾಗಿರುವ ಚುನಾವಣಾ ಹಂತ,..ಹೀಗೆ ಹಲವು ಕಾರಣಗಳಿಂದ ಈ ಹಂತದ ಚುನಾವಣೆ ಸುದ್ದಿಯಾಗುತ್ತಿದೆ

 

ಬಾಲಿವುಡ್‌ನ ಬಹುತೇಕ ತಾರೆಯರು, ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರ ನೆಲೆಯಾಗಿರುವ ಮುಂಬೈ ಲೋಕಸಭಾ ಕ್ಷೇತ್ರಗಳು ಸೆಲೆಬ್ರಿಟಿ ಮತದಾರರಿಂದ ಗಮನಸೆಳೆದಿವೆ. ಆದರೆ, ಮಹಾರಾಷ್ಟ್ರದ 17 ಕ್ಷೇತ್ರಗಳಲ್ಲಿ ಒಟ್ಟು ಶೇ 29.94ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಶೇ 52.37ರಷ್ಟು ಮತದಾನವಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا