Urdu   /   English   /   Nawayathi

ಪತ್ನಿ, ತಾಯಿಗೇ ಗೌರವ ಕೊಡದ ಮೋದಿ, ದೇಶಕ್ಕೆ ಗೌರವ ಕೊಡುವರೇ? : ಮಮತಾ ದೀದಿ ಕಿಡಿ

share with us

ಕೋಲ್ಕತ್ತಾ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಸಹ ಕುಟುಕಿದ್ದಾರೆ. ಹೆತ್ತತಾಯಿಗೆ ಗೌರವ ಕೊಡದ ವ್ಯಕ್ತಿ ದೇಶಕ್ಕೆ ಹೇಗೆ ಗೌರವ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ತನ್ನ ತಾಯಿಗೆ, ಹೆಂಡತಿಗೆ ಗೌರವ ಕೊಡದ ವ್ಯಕ್ತಿ ನಮಗೇ ಗೌರವದ ಪಾಠ ಹೇಳಿಕೊಡಲು ಬರುತ್ತಾರೆ. ಇಂತಹ ಪ್ರಧಾನಿಯನ್ನು ದೇಶ ಎಂದಿಗೂ ನಂಬುವುದಿಲ್ಲ ಎಂದು ಹೀಗಳೆದಿದ್ದಾರೆ. ಪ್ರಧಾನಿ ಮಾತನಾಡುವ ಮಾತು, ಬಳಸುವ ಭಾಷೆ ನಾಚಿಕೆ ಹುಟ್ಟಿಸುವಂತಿದೆ. ಗಂಭೀರ ವಿಚಾರಗಳು ಎದುರಾದಾಗ ಧಾರ್ಮಿಕತೆಯನ್ನು ಮುಂದೆ ತಂದು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಹಿಂದೆ ಇಂತಹ ಚುನಾವಣೆಗಳು ನಡೆದಿರಲಿಲ್ಲ ಎಂದು ಹೇಳಿದರು. ಈ ಹಿಂದೆಯೂ ಸಹ ದೀದಿ, ಪ್ರಧಾನಿ ಮೋದಿ ಕುರಿತು ವೈಯಕ್ತಿಕ ದಾಳಿ ನಡೆಸಿದ್ದರು. ಇಂದಿನ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್​ ಬಸು ಖಂಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا