Urdu   /   English   /   Nawayathi

ಇಂಡೋನೇಷ್ಯಾ ಚುನಾವಣೆ: ಮತ ಎಣಿಕೆ ಮಾಡುತ್ತಿದ್ದ 270 ಚುನಾವಣೆ ಸಿಬ್ಬಂದಿ ಸಾವು!

share with us

ಇಂಡೋನೇಷ್ಯಾ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ)ಮತ ಎಣಿಕೆ ಮಾಡುತ್ತಿದ್ದ 270 ಚುನಾವಣಾ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮಿಲಿಯನ್ ಗಟ್ಟಲೆ ಬ್ಯಾಲೆಟ್ ಪೇಪರ್ಗಳನ್ನು ಎಣಿಕೆ ಮಾಡಲು ದೀರ್ಘಾವಧಿ ಕಾರ್ಯ ನಿರ್ವಹಣೆ ಮಾಡಿರುವ ಪರಿಣಾಮ ಒಟ್ಟು 1,878 ಅಸ್ವಸ್ಥಗೊಂಡಿದ್ದು, 270 ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಏ.17 ರಂದು ನಡೆದ ಮತದಾನದ ಮತ ಎಣಿಕೆಗೆ 7 ಮಿಲಿಯನ್ ಜನರು ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಇಡಿ ಕೆಲಸ ಮಾಡಿರುವ ಪರಿಣಾಮದಿಂದಾಗಿ ತೀವ್ರವಾಗಿ ಆಯಾಸಗೊಂಡು ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಕೆಪಿಯು ನ ಚುನಾವಣಾ ಆಯೋಗದ ವಕ್ತಾರರು ಮಾಹಿತಿ ನೀಡಿದ್ದಾರೆ. ಚುನಾವಣಾ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂಸತ್, ಅಧ್ಯಕ್ಷೀಯ ಚುನಾವಣೆಯನ್ನು ಒಟ್ಟಿಗೆ ನಡೆಸಲಾಗಿದ್ದು 260 ಮಿಲಿಯನ್ ಜನರು ಇದೇ ಮೊದಲ ಬಾರಿಗೆ ಒಟ್ಟಿಗೆ ಮತದಾನ ಮಾಡಿದ್ದರು. 

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا