Urdu   /   English   /   Nawayathi

27 ವರ್ಷಗಳ ಬಳಿಕ ಕೋಮಾದಿಂದ ಹೊರಬಂದ ಮಹಿಳೆ: ವೈದ್ಯರಿಗೇ ಶಾಕ್!

share with us

ಅಬುಧಾಬಿ: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಯುನೈಟೆಡ್‌ ಅರಬ್ ಎಮಿರೇಟ್ಸ್‌ನ ( ಯುಎಇ) ಮಹಿಳೆಯೊಬ್ಬರು 27 ವರ್ಷದ ಬಳಿಕ ಕೋಮಾದಿಂದ ಹೊರಬಂದಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದೆ.  ಕಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಮುನೀರಾ ಅಬ್ದುಲ್ಲಾ ಎಂಬ ಮಹಿಳೆಯ ತಲೆಗೆ ಗಂಭೀರ ಪೆಟ್ಟಾಗಿದ್ದು ಮೆದುಳು ಆಪರೇಷನ್‌ಗೊಳಗಾಗಿದ್ದರು. 1991ರಲ್ಲಿ 32 ವರ್ಷದವರಾಗಿದ್ದ ಮುನೀರಾ ಅಬ್ದುಲ್ಲಾ, ತನ್ನ 4 ವರ್ಷದ ಪುತ್ರ ಒಮರ್ ವೆಬೇರ್‌ ಅನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿತ್ತು. ಬಳಿಕ, ಆಕೆಗೆ ಗಂಭೀರವಾಗಿ ಅಪಘಾತವಾದ ನಂತರ ಕೋಮಾಗೆ ಜಾರಿದ್ದರು. ಆದರೆ, ತನ್ನ ಮಗನನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಕಾಪಾಡಿದ್ದರು. ಈ ಹಿನ್ನೆಲೆ ಒಮರ್ ಕೈಗೆ ಮಾತ್ರ ಸ್ವಲ್ಪ ಪೆಟ್ಟಾಗಿದ್ದು ಆತ ಬಚಾವಾಗಿದ್ದ. ಇನ್ನು, ಅಬ್ದುಲ್ಲಾಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ಪ್ರಜ್ಞೆ ಬರುವುದೇ ಇಲ್ಲ ಎಂದುಕೊಂಡಿದ್ದರು. ಆದರೆ, ಕಳೆದ ವರ್ಷ ಮುನೀರಾಗೆ ಜರ್ಮನ್‌ನ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಿತ್ತು. ಅಪಘಾತವನ್ನು ನೆನೆಸಿಕೊಂಡ ಪುತ್ರ, ನಾವಿಬ್ಬರೂ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು. ಆದರೆ, ಅಪಘಾತ ಸಂಭವಿಸುವುದು ತನ್ನ ತಾಯಿಗೆ ಗೊತ್ತಾಗುತ್ತಿದ್ದಂತೆ ತನ್ನನ್ನು ತಬ್ಬಿಕೊಂಡು ಬಚಾವ್‌ ಮಾಡಿದ್ದರು. ಅಲ್ಲದೆ, ತನ್ನ ತಾಯಿ ಕೇವಲ ಕೋಮಾದಲ್ಲಿದ್ದರು. ಆಕೆ ಮೃತಪಟ್ಟಿರಲಿಲ್ಲ. ಅವರಿಗೆ ಪ್ರಜ್ಞೆ ಬಂದೇ ಬರುತ್ತದೆಂದು ತನಗೆ ಗೊತ್ತಿತ್ತು ಎಂದು ಒಮರ್ ಹೇಳಿಕೊಂಡಿದ್ದಾರೆ. ಯುಎಇಯಿಂದ ಮಹಿಳೆಯನ್ನು ಲಂಡನ್‌ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಪುನ: ಯುಎಇಗೆ ಮರಳಿದ್ದರು. ನಂತರ, ಜರ್ಮನಿಗೆ ಕರೆದುಕೊಂಡು ಹೋಗಲಾಗಿತ್ತು. ತನ್ನ ತಾಯಿಗೆ ಪ್ರಜ್ಞೆ ಬಂದ ತಕ್ಷಣ ಆಕೆ ತನ್ನ ಹೆಸರು ಹೇಳಿದರು. ಇದರಿಂದ ತನಗೆ ಅತೀವ ಸಂತೋಷವಾಯಿತು ಎಂದು ಪುತ್ರ ಹೇಳಿಕೊಂಡಿದ್ದಾರೆ. ಸದ್ಯ, ಆಕೆಗೆ ನೋವಿನ ಅರಿವಾಗುತ್ತದೆ ಹಾಗೂ ಸ್ವಲ್ಪ ಮಾತುಗಳನ್ನೂ ಆಡುತ್ತಾರೆ ಎಂದು ಸ್ಥಳೀಯ ಮಾಧ್ಯಮವೂ ವರದಿ ಮಾಡಿದೆ. ಕೆಲ ಕಾಲ ತನ್ನ ತಾಯಿಯೇ ತನ್ನನ್ನು ಎಬ್ಬಿಸಿ ಪ್ರಾರ್ಥನೆ ಮಾಡೋಣ ಎನ್ನುತ್ತಾರೆ ಎಂದು ಒಮರ್ ಹೇಳಿಕೊಂಡಿದ್ದಾರೆ. ಸದ್ಯ, ತಾಯಿ ಹಾಗೂ ಮಗ ಅಬುಧಾಬಿಗೆ ಮರಳಿದ್ದಾರೆ. ಆಕೆ ವ್ಹೀಲ್‌ಚೇರ್‌ನಲ್ಲಿದ್ದು ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ನಿಯಮಿತವಾಗಿ ಆಸ್ಪತ್ರೆಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا