Urdu   /   English   /   Nawayathi

ಶ್ರೀಲಂಕಾ ಸ್ಪೋಟ: ಕಾಸರಗೋಡಿನಲ್ಲಿ ಎನ್ಐಎ ಶೋಧ, ಶಂಕಿತ ದಾಖಲೆಗಳ ವಶ

share with us

ಕಾಸರಗೊಡು: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ದಿನ ನಡೆದ ಸರಣಿ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್ಐಎ) ಭಾನುವಾರ ಕೇರಳದ ಕಾಸರಗೋಡಿನಲ್ಲಿ ಶೋಧಕಾರ್ಯ ನಡೆಸಿದೆ. ಕಾಸರಗೋಡಿನ ನೈನರ್ಮೂಲ ಹಾಗೂಬಂದಡುಕ ಎಂಬಲ್ಲಿ ಇಬ್ಬರು ಶಂಕಿತರ ಮನೆ ಮೇಲೆ ಎನ್ಐಎ ಕೊಚ್ಚಿ ತಂಡ ದಾಳಿ ನಡೆಸಿದೆ. ಅಧಿಕಾರಿಯೊಬ್ಬರು ತಿಳೀಸಿದಂತೆ ಮುಂಜಾನೆ 6ಗಂಟೆಗೆ ದಾಳಿ ಪ್ರಾರಂಬವಾಗಿದ್ದು ಮಧ್ಯಾಹ್ನದ ವರೆಗೆ ಮುಂದುವರಿದಿದೆ. ದಾಳಿಯ ವೇಳೆ ನಾನಾ ಬಗೆಯ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೊಲಂಬೊದಲ್ಲಿನ ಸರಣಿ ಬಾಂಬ್ ಸ್ಫೋಟ ಹಾಗೂ ಇದೀಗ ಶ್ರೀಲಂಕಾದಿಂದ ನಿಷೇಧಿಸಲ್ಪಟ್ಟಿರುವ ತಮಿಳುನಾಡಿನ ತೌಹೀತ್ಫ಼್ ಜಮಾಥ್ ಗೆ ಸಂಬಂಧಿಸಿದ ದಾಖಲೆಗಳು ಇದಾಗಿರುವ ಸಾಧ್ಯತೆ ಇದೆ. ಎರಡೂ ಮನೆಗಳಲ್ಲಿನ ಸದಸ್ಯರು ಫೇಸ್ ಬುಕ್ ನಂತಹಾ  ಸಾಮಾಜಿಕ ಮಾಧ್ಯಮದ ಮೂಲಕ ಉಗ್ರ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ. ಈ ಹಿಂದೆ ಪತ್ರಿಕೆಯೊಂದು ವರದಿ ಮಾಡಿದ್ದಂತೆ ಶ್ರೀಲಂಕಾ ಉಗ್ರ ದಾಳಿಗೆ ಸಂಬಂಧಿಸಿ ಭಯೋತ್ಪಾದಕ ಸಂಘಟನೆಯೊಂದು ಮಲಯಾಳಂ ಹಾಗೂ ತಮಿಳಿನಲ್ಲಿ ವೀಡಿಯೋ ಬಿಡುಗಡೆ ಂಆಡಿದ ನಂತರ ಸುಮಾರು  60 ಮಲಯಾಳಿ ಕುಟುಂಬಗಳು ತೀವ್ರ ಶೋಧನೆ, ತಪಾಸಣೆಯ ಪರಿಧಿಯೊಳಗಿದ್ದಾರೆ. ಕಳೆದ ಭಾನುವಾರ ಶ್ರೀಲಂಕಾದಲ್ಲಿ ನಡೆದಿದ್ದ ಎಂಟು ಬಾಂಬ್ ಸ್ಪೋಟದಲ್ಲಿ  250 ಕ್ಕೂ ಅಧಿಕ ಮಂದಿ ಸತ್ತು ಐನೂರು ಜನರು ಗಾಯಗೊಂಡಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا