Urdu   /   English   /   Nawayathi

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?

share with us

ವಾಷಿಂಗ್ಟನ್: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ದೊಡ್ಡಣ್ಣ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ  ಪ್ರಕಾರ ಈ ಹಿಂದೆ ಅಮೆರಿಕದಲ್ಲಿರುವ ವೀಸಾ ಅವಧಿ ಮುಕ್ತಾಯವಾದ ಪಾಕಿಸ್ತಾನಿ ನಾಗರಿಕರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಅಮೆರಿಕ ಸರ್ಕಾರ ಹೇಳಿತ್ತು, ಆದರೆ ಅಮೆರಿಕ ಸರ್ಕಾರದ ಮನವಿಯ ಹೊರತಾಗಿಯೂ ಪಾಕಿಸ್ತಾನ ವೀಸಾ ಅವಧಿ ಮುಗಿದ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಅಮೆರಿಕ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ್ದು, ಭವಿಷ್ಯದಲ್ಲಿ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನಿರಾಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕ ವಿದೇಶಾಂಗ ಆಧಿಕಾರಿಗಳು ಪಾಕಿಸ್ತಾನದ ಪ್ರಜೆಗಳು ಮಾತ್ರವಲ್ಲದೇ ಪಾಕಿಸ್ತಾನದ ಅಧಿಕಾರಿಗಳಿಗೂ ವೀಸಾ ನಿರಾಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಹಾಲಿ ಇರುವ ಅಧಿಕಾರಿಗಳ ವೀಸಾ ತಡೆ  ಹಿಡಿಯಲೂ ಕೂಡ ಅಮೆರಿಕ ವಿದೇಶಾಂಗ ಇಲಾಖೆ ಅಧಿಕಾರಿಗಳು ಚಿಂತನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಆದರೆ ಪ್ರಸ್ತುತ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಫೆಡರಲ್ ರಿಜಿಸ್ಟರ್ ನೋಟಿಫಿಕೇಶನ್ ನಲ್ಲಿ ಉಲ್ಲೇಖಿಸಲಾದ ನಿರ್ಬಂಧದ ಅನ್ವಯ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ತಡೆಯುವ ಸಾಧ್ಯತೆ ಇದೆ. ಆ ಮೂಲಕ ಅಮೆರಿಕ ಕಾನೂನಿನ ಅಡಿಯಲ್ಲಿ ನಿರ್ಬಂಧಕ್ಕೆ ಒಳಪಟ್ಟ ಹತ್ತನೇ ರಾಷ್ಟ್ರ ಪಾಕಿಸ್ತಾನವಾಗಿದೆ. ಈ ಹಿಂದೆ 2011ರಲ್ಲಿ ಗಾನ, 2016ರಲ್ಲಿ ಗಾಂಬಿಯಾ, 2017 ರಲ್ಲಿ ಕಾಂಬೋಡಿಯ, ಎರಿಟ್ರೆಯ, ಜಿನಿಯಾ ಮತ್ತು ಸಿಯೆರಾ ಲಿಯೋನ್, 2018ರಲ್ಲಿ ಬರ್ಮಾ ಮತ್ತು ಲೋಸ್ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا