Urdu   /   English   /   Nawayathi

ಮೂವರು ಮಕ್ಕಳು, ಮಡದಿ ಕೊಂದು ತಪ್ಪೊಪ್ಪಿಗೆ ವಿಡಿಯೋ ಕಳುಹಿಸಿದ ಸಾಫ್ಟ್ ವೇರ್ ಎಂಜಿನೀಯರ್!

share with us

ಘಾಜಿಯಾಬಾದ್: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) 32 ವರ್ಷದ ನಿರುದ್ಯೋಗಿ ಸಾಫ್ಟ್ ವೇರ್ ಎಂಜಿನೀಯರ್ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ನಂತರ ತಪ್ಪೊಪ್ಪಿಗೆ ವಿಡಿಯೋವನ್ನು ವಾಟ್ಸಾಪ್ ನಲ್ಲಿ ಸಂಬಂಧಿಕರಿಗೆ ಕಳುಹಿಸಿರುವ ಧಾರುಣ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. 34 ವರ್ಷದ ಸುಮೀತ್ ಕುಮಾರ್ ತನ್ನ ಮಡದಿ ಮಕ್ಕಳನ್ನು ಕೊಂದು , ತಪ್ಪೊಪ್ಪಿಗೆ ವಿಡಿಯೋವನ್ನು ಫ್ಯಾಮಿಲಿ ಗ್ರೂಪ್ ಗೆ ವಾಟ್ಸಾಪ್ ಮಾಡಿ ಪರಾರಿಯಾಗಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ. ವಿಷಯ ತಿಳಿದ ಕುಮಾರ್ ಸಹೋದರಿ ಮತ್ತು ಆಕೆಯ ಪತಿ ಪಂಕಜ್ ಸಿಂಗ್ ಅಪಾರ್ಟ್ ಮೆಂಟ್ ಗೆ ಓಡಿ ಬಂದು ಬಾಗಿಲು ತೆರೆಯಲು ಯತ್ನಿಸಿದ್ದಾರೆ, ಆದರೆ ಬಾಗಿಲು ತೆಗೆಯಲು ಸಾಧ್ಯವಾಗದಿದ್ದಾಗ ಪೊಲೀಸರಿಗೆ ತಿಳಿಸಿ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅವರು ಬಾಗಿಲು ಮುರಿದು ಒಳಬಂದಾಗ  ಮಕ್ಕಳು ಮತ್ತು ಕುಮಾರ್ ಪತ್ನಿ ಗಾಯಗೊಂಡು ಬಿದ್ದಿದ್ದರು. ಕುಮಾರ್ ಪತ್ನಿ ಅಂಶು ಬಾಲಾ, ಐದು ವರ್ಷದ ಮಗು ಪ್ರಥಮೇಶ್, ನಾಲ್ಕು ವರ್ಷದ ಅವಳಿ ಮಕ್ಕಳಾದ ಆಕೃತಿ ಮತ್ತು ಆರವ್ ಮೃತ ದುರ್ದೈವಿಗಳು. ಅಂಶು ಪ್ಲೇ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಕುಮಾರ್ ಡಿಸೆಂಬರ್ ನಲ್ಲೆ ಕೆಲಸ ಬಿಟ್ಟು ಮನೆಯಲ್ಲಿದ್ದ ಎಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. ಅಂಶು ಪೋಷಕರು ಕೂಡ ಇವರ ಜೊತೆಯಲ್ಲಿಯೇ ವಾಸಿಸುತ್ತಿದ್ದರು. ಆದರೆ ಸಂಬಂದಿಕರ ಮದುವೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ತೆರಳಿದ್ದರು, ಹಣಕಾಸಿನ ಸಮಸ್ಯೆಯಿಂದಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا