Urdu   /   English   /   Nawayathi

ಅನಂತಕುಮಾರ್​​​ ಹೆಗಡೆಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ

share with us

ಶಿರಸಿ: 21 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್​​​ ಹೆಗಡೆಗೆ ಅಪರಿಚಿತ ವ್ಯಕ್ತಿವೋರ್ವ ಇಂಟರ್ ನೆಟ್ ಕಾಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭದ್ರತೆ ನೀಡುವಂತೆ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಶಿರಸಿಯಲ್ಲಿ ದೂರು ನೀಡಿದ್ದಾರೆ. ಮಧ್ಯರಾತ್ರಿ 12-30ಕ್ಕೆ ಅನಂತಕುಮಾರ್​​​ ಹೆಗಡೆ ಮನೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಪದಗಳಿಂದ ದುಷ್ಕರ್ಮಿ ನಿಂದಿಸಿದ್ದಾನೆ ಎಂದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಸುರೇಶ್​​​ ದೂರು ದಾಖಲಿಸಿದ್ದಾರೆ. 2233 ನಂಬರ್ ಮೂಲಕ ಮನೆಗೆ ಕರೆ ಮಾಡಲಾಗಿದೆ. ಅನಂತಕುಮಾರ್​ ಪತ್ನಿ ಶ್ರೀರೂಪಾ ಈ ಕರೆ ಸ್ವೀಕರಿಸಿದ್ದು, ಒಂದು ಬಾರಿ ತಪ್ಪಿಸಿಕೊಂಡಿದ್ದೀರ. ಮತ್ತೆ ಮಿಸ್ ಆಗುವುದಿಲ್ಲ. ನಿಮಗೆ ಭದ್ರತೆ ನೀಡಿದ ಸೆಕ್ಯುರಿಟಿಯವರನ್ನೂ ಬಿಡುವುದಿಲ್ಲ. ಯಾವ ಪೊಲೀಸ್​ಗೆ ಬೇಕಾದ್ರು ಹೇಳಿಕೊಳ್ಳಿ. ನಮಗೆ ಏನೂ ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಪೆಬ್ರವರಿ 10 ರಂದು ಸಹ ಅಪರಿಚಿತ ವ್ಯಕ್ತಿವೋರ್ವ ಇದೇ ರೀತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا