Urdu   /   English   /   Nawayathi

ಸರಣಿ ಸ್ಫೋಟ ಕುರಿತು 10ದಿನ ಮೊದಲೇ ಎಚ್ಚರಿಸಿದ್ದ ಲಂಕಾ ಪೊಲೀಸ್ ಮುಖ್ಯಸ್ಥ..!

share with us

ಕೊಲೊಂಬೊ: 21 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶ್ರೀಲಂಕಾದಲ್ಲಿ 200ಕ್ಕೂ ಹೆಚ್ಚು ಜನರು ಬಲಿಯಾದ ಉಗ್ರಗಾಮಿಗಳ ದಾಳಿ ಬಗ್ಗೆ ಕೊಲೊಂಬೊದ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ್ ಎಚ್ಚರಿಕೆ ನೀಡಿದ್ದರು. ರಾಜಧಾನಿ ಕೊಲೊಂಬೊ ಸೇರಿದಂತೆ ಶ್ರೀಲಂಕಾದಲ್ಲಿ ವಿವಿಧೆಡೆ ಆತ್ಮಾಹುತಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಾನು 10ದಿನಗಳ ಹಿಂದೆಯೇ ರಾಷ್ಟ್ರಾದ್ಯಂತ ಕಟ್ಟೆಚ್ಚರದ ಸಂದೇಶ ನೀಡಿದ್ದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ದಾಳಿ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಅದನ್ನು ನಾನು ನನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದೆ. ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದೆ. ನಮ್ಮ ಬಿಗಿ ಭದ್ರತೆಯ ನಡುವೆಯು ಉಗ್ರರು ಈ ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಭಯೋತ್ಪಾದಕರನ್ನು ಕಾನೂನು ಕುಣಿಕೆಗೆ ಒಳಪಡಿಸದೆ ಬಿಡುವುದಿಲ್ಲ ಎಂದು ಅವರು ಹೇಳಿದರು. 150 ಕ್ಕೂ ಹೆಚ್ಚು ಸಾವು ..!  : ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾದ ಕೊಲಂಬೋದಲ್ಲಿಂದು ಸರಣಿ ಬಾಂಬ್ ಸ್ಫೋಟಿಸಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ದುಷ್ಕøತ್ಯದ ಹಿಂದೆ ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯ ಭಯೋತ್ಪಾದನೆ ಸಂಘಟನೆ ಐಸಿಸ್ ಕೈವಾಡವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಭಾರತೀಯರು ಮತ್ತು ಶ್ರೀಲಂಕಾದ ಕ್ರೈಸ್ತರನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದಾರೆ. ದ್ವೀಪ ರಾಷ್ಟ್ರ ರಾಜಧಾನಿ ಕೊಲಂಬೋ ಈಸ್ಟರ್ ಸಂಡೇಯಾದ ಈ ದಿನದಂದು ಸರಣಿ ಸ್ಫೋಟಗಳಿಂದ ಅಕ್ಷರಶಃ ರಕ್ತಸಿಕ್ತವಾಗಿದೆ. 5 ಚರ್ಚ್‍ಗಳು ಮತ್ತು 3 ಪಂಚತಾರಾ ಹೊಟೇಲ್‍ಗಳು ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಸಂಭವಿಸಿದ ಸರಣಿ ಸ್ಫೋಟಗಳಿಂದ ಅಪಾರ ಸಾವು-ನೋವು ಉಂಟಾಗಿದೆ. ಗಾಯಗೊಂಡ 800ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಏಕಕಾಲದಲ್ಲಿ ಸ್ಫೋಟಗಳು ಸಂಭವಿಸುತ್ತಿದ್ದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا