Urdu   /   English   /   Nawayathi

ಈಸ್ಟರ್ ಸಂಡೇ ದಿನ ಶ್ರೀಲಂಕಾ ಚರ್ಚ್, ಹೋಟೆಲ್ ಮೇಲೆ ಬಾಂಬ್ ದಾಳಿ: 137 ಸಾವು, 300 ಜನರಿಗೆ ಗಾಯ

share with us

ಕೊಲಂಬೋ: 21 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಈಸ್ಟರ್ ಭಾನುವಾರದ ದಿನವಾದ ಇಂದು (ಏ. 21)ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ  137ಕ್ಕೂ ಹೆಚ್ಚಿನ ಜನರು ಸತ್ತು 300  ಮಂದಿ ಗಾಯಗೊಂಡಿದ್ದಾರೆ. ಈಸ್ಟರ್ ಭಾನುವಾರದ ದಿನ ಚರ್ಚ್ ಹ್ಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ಸ್ಥಳೀಯ ಕಾಲಮಾನ ಬೆಳಿಗ್ಗೆ 8.45ರ ಸುಮಾರು ಸ್ಫೋಟ ಸಂಭವಿಸಿದೆ ಎಂದು ಪೋಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದ್ದಾರೆ.

View image on Twitter

ANI@ANI

EAM Sushma Swaraj on multiple blasts in Srilanka: I am in constant touch with Indian High Commissioner in Colombo. We are keeping a close watch on the situation. (file pic)

767

10:51 AM - Apr 21, 2019

170 people are talking about this

Twitter Ads info and privacy

ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ನಲ್ಲಿ ಸ್ಪೋಟ ಸಂಬವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ  ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.

ANI@ANI

AFP news agency: Hospital sources,'Death toll in Sri Lanka blasts rises to 129'.

249

12:16 PM - Apr 21, 2019 · New Delhi, India

Twitter Ads info and privacy

161 people are talking about this

ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವಕ್ತಾರ ಡಾ. ಸಮ್ಮಿದಿ ಸಮರಕೂನ್, ಹೇಳಿದಂತೆ ಸುಮಾರು 280 ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ. "ನಮ್ಮ ಚರ್ಚ್ ಗಳ ಮೇಲೆ ಬಾಂಬ್ ದಾಳಿಯಾಗಿದೆ, ದಯಮಾಡಿ ಬಂದು ಸಹಾಯ ಮಾಡಿ" ಎಂದು ಪಶ್ಚಿಮದ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿನ ಸೇಂಟ್ ಸೆಬಾಶಿಷಿಯನ್ ಚರ್ಚ್ ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಳ್ಳಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا