Urdu   /   English   /   Nawayathi

ದುಬೈ ಪ್ರಿನ್ಸ್ ಹೆಸರಿನಲ್ಲಿ ಚೆನ್ನೈ ಮಹಿಳೆಗೆ 5 ಲಕ್ಷ ರು.ವಂಚಿಸಿದ ಹ್ಯಾಕರ್

share with us

ಚೆನ್ನೈ: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ದುಬೈ ಪ್ರಿನ್ಸ್ ಅವರ ಅಧಿಕೃತ ಟ್ವಿಟ್ಟರ್ ಖಾತೆ ಬಳಸಿ ವ್ಯಕ್ತಿಯೊಬ್ಬ ತನ್ನಿಂದ 5 ಲಕ್ಷ ರುಪಾಯಿ ಪಡೆದು ವಂಚಿಸಿರುವುದಾಗಿ ಚೆನ್ನೈ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ದುಬೈ ಪ್ರಿನ್ಸ್ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್ ಮುಕ್ತುಮ್ ಅವರ ಟ್ವಿಟ್ಟರ್ ಖಾತೆಯೊಂದಿಗೆ ನಡೆಸಿದ ಖಾಸಗಿ ಸಂಭಾಷಣೆಯ ವಿವರವನ್ನು ಮಹಿಳೆ ತಮಗೆ ನೀಡಿದ್ದು, ಇದು ಹ್ಯಾಕರ್ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚೆನ್ನೈ ಮೂಲದ ಹೇಮಲತಾ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ಕೆಲವು ವರ್ಷಗಳ ಕಾಲ ದುಬೈನಲ್ಲಿ ವಾಸವಾಗಿದ್ದರು. ಹೀಗಾಗಿ ಅವರು ಪ್ರಿನ್ಸ್, ದುಬೈ ಕಿಂಗ್ ಹಾಗೂ ಸೌದಿ ಉಪಾಧ್ಯಕ್ಷರ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಳೆದ ಜನವರಿಯಲ್ಲಿ ಪ್ರಿನ್ಸ್ ಟ್ವಿಟ್ಟರ್ ಖಾತೆಯಿಂದ ನನಗೆ ಸಂದೇಶ ಬರಲು ಆರಂಭಿಸಿತ್ತು. ಅಚ್ಚರಿ ಹಾಗೂ ಕುತೂಹಲದಿಂದ ಅವರ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದ ಮಹಿಳೆ, ಅವರೊಂದಿಗೆ ತಾನು ಉತ್ತಮ ಸಂಬಂಧ ಹೊಂದುತ್ತಿರುವುದಾಗಿ ಭಾವಿಸಿದ್ದರು. ತಾನು ಪ್ರಿನ್ಸ್ ಎಂದು ಹೇಳಿಕೊಂಡು ಮಹಿಳೆಗೆ ಟ್ವೀಟ್ ಮಾಡುತ್ತಿದ್ದ ವ್ಯಕ್ತಿ ಒಂದು ದಿನ, ಪ್ರಿನ್ಸ್ ಅರಮನೆಯಲ್ಲಿ ನಿನಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳುತ್ತಾನೆ. ಅಲ್ಲದೆ ಮಹಿಳೆಯನ್ನು ರಾಯಲ್ ಲಂಚ್ ಗೆ ಆಹ್ವಾನಿಸುತ್ತಾನೆ. ಇದಕ್ಕೆ ಮಹಿಳೆ ತಾನು ಜನವರಿ ಅಂತ್ಯದಲ್ಲಿ ದುಬೈಗೆ ಭೇಟಿ ನೀಡುವುದಾಗಿ ಹೇಳುತ್ತಾರೆ. ಆದರೆ ಅರಮನೆಯ ಪ್ರವೇಶ ಕಾರ್ಡ್ ಪಡೆಯಲು 5 ಲಕ್ಷ ರುಪಾಯಿ ನೀಡಬೇಕು ಎಂದು ಆ ವ್ಯಕ್ತಿ ಹೇಳಿದ್ದಾರೆ. ಹೇಮಲತಾ ಕೂಡಲೇ ವೆಸ್ಟರ್ನ್ ಯೂನಿಯನ್ ಮೂಲಕ 5 ಲಕ್ಷ ರುಪಾಯಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ ಟ್ವೀಟರ್ ಖಾತೆಯಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಮಹಿಳೆ ದೂರಿದ್ದಾರೆ. ಈ ಘಟನೆ ನಂತರ ಮಹಿಳೆ ದುಬೈಗೆ ತೆರಳಿ ಅರಮನೆಗೆ ಭೇಟಿ ನೀಡಲು ಯತ್ನಿಸಿದ್ದಾರೆ. ಆದರೆ ಅವರಿಗೆ ಪ್ರವೇಶ ನಿರಾಕರಿಸಲಾಗಿದ್ದು, ಬಳಿಕ ತಾನು ಮೋಸ ಹೋಗಿರುವುದಾಗಿ ದುಬೈಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದುಬೈ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا