Urdu   /   English   /   Nawayathi

ಮತ್ತೆ ನಕ್ಸಲರ ಅಟ್ಟಹಾಸ... ಮಹಿಳಾ ಚುನಾವಣಾಧಿಕಾರಿಗೆ ಗುಂಡಿಟ್ಟು ಹತ್ಯೆ

share with us

ಕಂದಮಾಲ್​​(ಒಡಿಶಾ): 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ಅಧಿಕಾರಿಯನ್ನು ನಕ್ಸಲರು ಗುಂಡಿಕ್ಕೆ ಹತ್ಯೆಗೈದಿದ್ದಾರೆ. ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನಾವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ ಸಂಜುಕ್ತಾ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದೇ ಸಂರ್ಭದಲ್ಲಿ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವಾಹನದಲ್ಲಿದ್ದ ಇತರರಿಗೆ ಯಾವುದೇ ಹಾನಿಯಾಗಿಲ್ಲ. ಒಡಿಶಾದ ಫುಲ್ಬಾನಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದ್ದು ಇದಕ್ಕಾಗಿ ಅಧಿಕಾರಿಗಳು ತೆರಳುತ್ತಿದ್ದರು.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا