Urdu   /   English   /   Nawayathi

ಬೆಂಕಿ ತಗುಲಿದ್ದ ಬೈಕ್​​ನಲ್ಲೇ ಹೆಂಡ್ತಿ, ಮಗುವಿನೊಂದಿಗೆ ರೈಡ್​... ಪೊಲೀಸ್​ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

share with us

ಲಖನೌ: 17 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪೊಲೀಸರು ಎಂದಾಕ್ಷಣ ಸಾರ್ವಜನಿಕರಲ್ಲಿ ಮೂಡುವ ಅಭಿಪ್ರಾಯವೇ ವಿಚಿತ್ರವಾಗಿರುತ್ತದೆ. ಅವರು ಮಾಡುವ ಸಮಾಜಮುಖಿ ಕಾರ್ಯ ಕೆಲವೊಮ್ಮೆ ಎಲ್ಲರ ಗಮನಕ್ಕೆ ಬಾರದೇ ಹೋಗಬಹುದು. ಆದರೆ ಇದೀಗ ಉತ್ತರಪ್ರದೇಶದ ಪೊಲೀಸರು ಮಾಡಿರುವ ಕಾರ್ಯವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

UP100✔@up100

-PRV1617 आज 108 km से 112 की तरफ जा रही थी तभी एक बाइक सवार ने तेजी से क्रॉस किया जिसके पीछे बंधे बैग में आग लगी दिखाई दी जो तेजी से बढ़ रही थी,बिना कोई देर किए उस बाइक का 4 km पीछाकर रुकवा,बाइक सवार दंपत्ति को नीचे उतारकर आग बुझाया @Uppolice @UPGovt

20.4K

11:14 PM - Apr 14, 2019

9,228 people are talking about this

Twitter Ads info and privacy

ಉತ್ತರಪ್ರದೇಶದ ಇಟಾವಾದ ಹೈವೇಯಲ್ಲಿ ವ್ಯಕ್ತಿವೋರ್ವ ತನ್ನ ಹೆಂಡತಿ ಹಾಗೂ ಮಗುವನ್ನ ಬೈಕ್​​ ಮೇಲೆ ಕುಳಿರಿಸಿಕೊಂಡು ತೆರಳುತ್ತಿದ್ದ. ಈ ವೇಳೆ ಬೈಕ್​ನ ಹಿಂಬಾಗದ ಟೈರ್​ಗೆ ಬೆಂಕಿ ತಗುಲಿದೆ. ಆದರೆ ಇದನ್ನ ಅವರು ಗಮನಿಸದೇ ರಭಸವಾಗಿ ತೆರಳಿದ್ದಾರೆ. ಇದೇ ವೇಳೆ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ನೋಡಿದ್ದಾರೆ. ತಕ್ಷಣ ಅವರನ್ನ ಬೆನ್ನತ್ತಿರುವ ಪೊಲೀಸರು ಸುಮಾರು 4 ಕಿ.ಮೀ ದೂರ ಬೆನ್ನಟ್ಟುಕೊಂಡು ಹೋಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಬೈಕ್​ನಿಂದ ಕೆಳಗಿಳಿದ ಹೆಂಡತಿ, ಗಂಡ ಹಾಗೂ ಮಗು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ತದನಂತರ ಬೈಕ್​ಗೆ ತಗುಲಿದ ಬೆಂಕಿ ನಂದಿಸಿದ್ದಾರೆ. ಇದೀಗ ಈ ಅಪರೂಪದ ವಿಡಿಯೋವನ್ನ ಪೊಲೀಸರು ತಮ್ಮ ಟ್ವಿಟರ್​​ನಲ್ಲಿ ಹಾಕಿಕೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا