Urdu   /   English   /   Nawayathi

ನಾಟ್ರೆ ಡೇಮ್ ಚರ್ಚ್‌ಗೆ ಬೆಂಕಿ ಬೀಳುವ ಒಂದು ತಾಸು ಮೊದಲು ತೆಗೆದ ಫೋಟೊ ವೈರಲ್

share with us

ಪ್ಯಾರಿಸ್: 17 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಇತಿಹಾಸ ಪ್ರಸಿದ್ಧ 12ನೇ ಶತಮಾನದ ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ಪ್ರವಾಸಿಗರೊಬ್ಬರು ಸೆರೆಹಿಡಿದಿದ್ದ ಚಿತ್ರವೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಅಮೆರಿಕದ ಮಿಚಿಗನ್‌ನ ಬ್ರೂಕ್ ವಿಂಡ್ಸರ್ ಅವರು ಸ್ನೇಹಿತೆ ಜತೆ ಸೋಮವಾರ ಚರ್ಚ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಪ್ಪ ಮತ್ತು ಮಗಳು (ವಿಂಡ್ಸರ್ ಭಾವಿಸಿರುವಂತೆ) ಆಟವಾಡುತ್ತಿರುವ ಛಾಯಾಚಿತ್ರ ಸೆರೆಹಿಡಿದಿದ್ದರು. ಇದನ್ನು ಆ ಅಪ್ಪ, ಮಗಳಿಗೆ ನೀಡಲು ಉದ್ದೇಶಿಸಿರುವುದಾಗಿ ಹೇಳಿರುವ ವಿಂಡ್ಸರ್, ಅವರನ್ನು ಹುಡಕಲು ನೆರವು ನೀಡುವಂತೆ ಕೋರಿ ಟ್ವೀಟ್ ಮಾಡಿದ್ದಾರೆ. ‘ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ನಾನು ಈ ಚಿತ್ರವನ್ನು ಸೆರೆಹಿಡಿದೆ. ಆ ತಂದೆಯ ಬಳಿ ಹೋಗಿ ಈ ಫೋಟೊ ನಿಮಗೆ ಬೇಕೇ ಎಂದು ಕೇಳಬೇಕು ಎಂದುಕೊಂಡಿದ್ದೆ. ಈಗ ನಾನದನ್ನು ಅವರಿಗೆ ನೀಡಬಯಸಿದ್ದೇನೆ. ಟ್ವಿಟರ್, ನಿನ್ನಲ್ಲೇನಾದರೂ ಮ್ಯಾಜಿಕ್ ಇದ್ದರೆ ಅವರಿಗೆ ಈ ಫೋಟೊ ಸಿಗುವಂತೆ ಮಾಡು’ ಎಂದು ವಿಂಡ್ಸರ್ ಟ್ವೀಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

View image on Twitter

Brooke Windsor@brookeawindsor

I took this photo as we were leaving about an hour before it caught on fire. I almost went up to the dad and asked if he wanted it. Now I wish I had. Twitter if you have any magic, help him find this 

435K

5:30 AM - Apr 16, 2019 · Cathédrale Notre-Dame de Paris

211K people are talking about this

Twitter Ads info and privacy

‘ಅವರು ಅಪ್ಪ, ಮಗಳು ಹೌದಾ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಮೇಲ್ನೋಟಕ್ಕೆ ಹಾಗೆ ಭಾವಿಸಿದೆ. ಅವರು ಚಿಕ್ಕಪ್ಪ, ಸಹೋದರ, ಸ್ನೇಹಿತ ಆಗಿರಲೂಬಹುದು. ಅವರನ್ನು ಪತ್ತೆಮಾಡುವವರೆಗೂ ಅದು ಗೊತ್ತಾಗದು’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ ಆ ಫೋಟೊ ಬೇಕೆಂದು ಬಯಸುತ್ತಿದ್ದೆ. ಆ ವ್ಯಕ್ತಿಯೂ ಹಾಗೆಯೇ ಭಾವಿಸಬಹುದು ಎಂದುಕೊಂಡಿದ್ದೇನೆ. ಫೋಟೊದಲ್ಲಿರುವ ವ್ಯಕ್ತಿಯನ್ನು ಪತ್ತೆಮಾಡುವ ಆಶಾವಾದ ಹೊಂದಿದ್ದೇನೆ ಎಂದೂ ವಿಂಡ್ಸರ್ ಹೇಳಿದ್ದಾರೆ. ಸೋಮವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಟ್ರೆ ಡೇಮ್ ಚರ್ಚ್‌ನ ಮೇಲ್ಭಾಗದ ಪಿರಮಿಡ್ ಆಕೃತಿ ಮತ್ತು ಛಾವಣಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಚರ್ಚ್‌ನ 69 ಮೀ. ಎತ್ತರದ ಅವಳಿ ಗೋಪುರಗಳಿಗೆ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا