Urdu   /   English   /   Nawayathi

ಮೊದಲನೇ ಹಂತದ ಚುನಾವಣೆ ಹಿಂಸಾಚಾರಕ್ಕೆ ಆಂಧ್ರದಲ್ಲಿ ಇಬ್ಬರು ಬಲಿ..!

share with us

ಅನಂತಪುರಂ, ಏ.11- ಲೋಕಸಭಾ ಸಮರದ ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರ ಪ್ರದೇಶದ ವಿವಿಧೆಡೆ ಚುನಾವಣಾ ಹಿಂಸಾಚಾರ ಭುಗಿಲೆದ್ದಿದೆ. ಅನಂತಪುರಂನಲ್ಲಿ ಇಂದು ಬೆಳಗ್ಗೆ ಮತದಾನದ ಸಂದರ್ಭದಲ್ಲೇ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮತ್ತು ವಿರೋಧಪಕ್ಷ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಭೀಕರ ಘರ್ಷಣೆ ಯಲ್ಲಿ ಇಬ್ಬರು ಬಲಿಯಾಗಿ, ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಗುಂಟೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಈ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮತಕೇಂದ್ರದಲ್ಲೇ ಮಾರಾಮಾರಿ ನಡೆದು ಅನೇಕರು ಗಾಯಗೊಂಡಿದ್ದಾರೆ. ಕಾರ್ಯಕರ್ತರ ಬಲಿ : ಆನಂತಪುರಂನ ಪೀಟಾಪುರಂನಲ್ಲಿ ಟಿಡಿಪಿ ಮತ್ತು ವೈಎಸ್‍ಆರ್‍ಸಿ ಕಾರ್ಯಕರ್ತರ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಹತರಾಗಿ ಕೆಲವರು ಗಂಭೀರ ಗಾಯಗೊಂಡರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಅನಂತಪುರಂನ ಪೀಟಾಪುರಂ ಮತಗಟ್ಟೆಯೊಂದರ ಬಳಿ ಟಿಡಿಪಿ ಮತ್ತು ವೈಎಸ್‍ಆರ್‍ಸಿ ಕಾರ್ಯಕರ್ತರು ಪರಸ್ಪರ ಮಚ್ಚು, ಲಾಂಗ್‍ಗಳೊಂದಿಗೆ ಬಡಿದಾಡಿದರು. ಈ ಭೀಕರ ಘರ್ಷಣೆಯಲ್ಲಿ ಟಿಡಿಪಿಯ ಭಾಸ್ಕರ ರೆಡ್ಡಿ ಮತ್ತು ವೈಎಸ್‍ಆರ್‍ಸಿ ಕಾರ್ಯಕರ್ತ ಪುಲ್ಲಾ ರೆಡ್ಡಿ ಹತರಾದರು. ಈ ಮಾರಾಮಾರಿಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೀಟಾಪುರಂನಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮತಕೇಂದ್ರದಲ್ಲೇ ಮಾರಾಮಾರಿ :
ಗುಂಟೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಈ ಎgಡು ಪಕ್ಷದ ಕಾರ್ಯಕರ್ತರ ನಡುವೆ ಮತಕೇಂದ್ರದಲ್ಲೇ ಮಾರಾಮಾರಿ ನಡೆದು ಅನೇಕರು ಗಾಯಗೊಂಡಿರುವ ಘಟನೆ ಗುಂಟೂರು ಜಿಲ್ಲೆಯ ನರಸಾಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಈ ಘರ್ಷಣೆಯಿಂದ ಆ ಪ್ರದೇಶದಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.  ಗುರ್ಜಾಲಾದಲ್ಲಿನ ಮತಗಟ್ಟೆಯಲ್ಲಿ ನಡೆದ ಈ ಘರ್ಷಣೆಯಲ್ಲಿ ವಿದ್ಯುನ್ಮಾನ ಯಂತ್ರಗಳು ಮತ್ತು ಪೀಠೋಪಕರಣಗಳು ಧ್ವಂಸಗೊಂಡಿವೆ. ಗುಂಟೂರು ಜಿಲ್ಲೆಯ ನರಸಾಪೇಟೆಯ ಗುರ್ಜಾಲಾ ಮತಗಟ್ಟೆಯೊಂದರಲ್ಲಿ ಮತದಾನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಟಿಡಿಪಿ ಮತ್ತು ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಏಜೆಂಟರ ನಡುವೆ ಪರಸ್ಪರ ಚುನಾವಣಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪರಿಸ್ಪರ ಕೈಕೈ ಮಿಲಾಯಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡು. ಕೈಗೆ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದರು. ಈ ಘರ್ಷಣೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಮತಕೇಂದ್ರದಲ್ಲಿದ್ದ ಇವಿಎಂ ಮತ್ತು ಪೀಠೋಪಕರಣಗಳು ಧ್ವಂಸವಾಗಿವೆ. ಸ್ಥಳದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ದ ದೂರು ದಾಖಲಿಸಿಕೊಳ್ಳಲಾಗಿದೆ. ಈ ಘರ್ಷಣೆಯಿಂದ ಆ ಪ್ರದೇಶದಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಮತದಾನ ಮುಂದುವರಿಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಟೂರಿನ ಕೆಲವು ಮತಗಟ್ಟೆಗಳ ಬಳಿಯೂ ಟಿಡಿಪಿ ಮತ್ತು ವೈಎಸ್‍ಆರ್‍ಸಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಸಣ್ಣ ಘರ್ಷಣೆಗಳು ನಡೆದಿರುವ ವರದಿಗಳಿವೆ.  ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಈ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆಯುತ್ತಿದ್ದ ಘರ್ಷಣೆಗಳು ಈಗ ಮತದಾನ ಸಂದರ್ಭದಲ್ಲಿ ಭುಗಿಲೆದ್ದು ಸಾವು-ನೋವುಗಳಿಗೆ ಕಾರಣವಾಗಿದೆ.

ಆಂಧ್ರದಲ್ಲಿ ಹೈವೋಲ್ಟೆಜ್ ಚುನಾವಣೆ:
ದಕ್ಷಿಣಭಾರತದ ಮುಖ್ಯ ರಾಜಕೀಯ ಚಟುವಟಿಕೆಗಳ ತಾಣವಾಗಿರುವ ನಾಳೆ ಲೋಕಸಭೆಯೊಂದಿಗೆ ವಿಧಾನಸಭೆಗೆ ಬಿರುಸಿನ ಮತದಾನವಾಗುತ್ತಿದ್ದರೆ, ಇನ್ನೊಂದೆಡೆ ಘರ್ಷಣೆ. ಹಿಂಸಾಚಾರದಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೇಶಂ ಪಾರ್ಟಿ (ಟಿಡಿಪಿ) ಮತ್ತು ವೈ.ಎಸ್.ಜಗನ್‍ಮೋಹನ್ ರೆಡ್ಡಿ ವೈಎಸ್‍ಆರ್ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا