Urdu   /   English   /   Nawayathi

ಶಾಕಿಂಗ್ : ಆರ್‌ಬಿಐ ಕೇಂದ್ರ ಕಚೇರಿ ಮೇಲೆ ಹೆಲಿಕಾಪ್ಟರ್‌ಗಳ ಹಾರಾಟ..!?

share with us

ಮುಂಬೈ: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಭಾರತದ ಆರ್ಥಿಕತೆಯ ನರನಾಡಿಯಂತಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ)ನ ಕೇಂದ್ರ ಕಚೇರಿ ಕಟ್ಟಡದ ಮೇಲೆ ಇಂದು ಕೆಲವು ಹೆಲಿಕಾಪ್ಟರ್‍ಗಳು ಪ್ರದಕ್ಷಿಣೆ ಹಾಕಿ ಮುಂಬೈ ಜನತೆಯಲ್ಲಿ ತೀವ್ರ ಕುತೂಹಲ ಕೆರಳಿಸಿದವು ದಕ್ಷಿಣ ಮುಂಬೈನಲ್ಲಿರುವ 25ಅಂತಸ್ತುಗಳ ಆರ್‍ಬಿಐ ಹೆಡ್‍ಕ್ವಾಟ್ರರ್ಸ್ ಕಟ್ಟಡದ ಮೇಲೆ ಹೆಲಿಕಾಪ್ಟರ್‍ವೊಂದು ಇಳಿಯಿತು. ಅದರಿಂದ ಕೆಲವು ಸಿಬ್ಬಂದಿಗಳು ಕೆಳಗಿಳಿದು ರಕ್ಷಣಾ ಕಾರ್ಯಾಚರಣೆ ಚಟುವಟಿಕೆ ನಡೆಸಿದರು. ಎದುರಾಗಬಹುದಾದ ಯಾವುದೇ ಪರಿಸ್ಥಿತಿ ನಿಭಾಯಿಸಲು ಭದ್ರತಾ ಪಡೆಗಳು ಸಜ್ಜಾಗಿವೆ ಎಂಬುದರ ಅಣಕು ಪ್ರದರ್ಶನ ಇದಾಗಿತ್ತು..! ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭದ್ರತಾ ಪಡೆಯ ಉನ್ನತ ಅಧಿಕಾರಿಯೊಬ್ಬರು ಇದೊಂದು ಅಣಕು ಪ್ರದರ್ಶನ. ತುರ್ತು ಸಂದರ್ಭದಲ್ಲಿ ಯಾವ ರೀತಿ ಕಾರ್ಯಾಚರಣೆಗಳನ್ನು ನಡೆಸಬೇಕು ಎಂಬುದರ ಅಣಕು ಪ್ರದರ್ಶನ ಇದಾಗಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا