Urdu   /   English   /   Nawayathi

ಲಂಡನ್ ನಲ್ಲಿದ್ದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಬಂಧನ

share with us

ಲಂಡನ್: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸರ್ಕಾರಗಳ ಒಳಗಿನ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿ ವಿಶ್ವಾದ್ಯಂತ ಸುದ್ದಿಯಾಗಿದ್ದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ನ್ನು 7 ವರ್ಷಗಳ ಬಳಿಕ ಬಂಧಿಸಲಾಗಿದೆ. ಈಕ್ವೆಡೇರಿಯನ್ ದೂತಾವಾಸ ಕಚೇರಿಯಿಂದ ಬ್ರಿಟನ್ ಪೊಲೀಸರು ಜೂಲಿಯನ್ ಅಸಾಂಜ್ ನ್ನು ಬಂಧಿಸಿದ್ದಾರೆ. ಸ್ವೀಡನ್ಗೆ ಗಡಿಪಾರಾಗುವುದರಿಂದ ತಪ್ಪಿಸಿಕೊಳ್ಳಲು ಜೂಲಿಯನ್ ಅಸಾಂಜ್ 2012 ರಿಂದ ಇದೇ ಕಚೇರಿಯಲ್ಲಿ ರಕ್ಷಣೆ ಪಡೆದಿದ್ದರು. ಜೂಲಿಯನ್ ಅಸಾಂಜ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಈ ಸಂಬಂಧದ ತನಿಖೆಗಾಗಿ ಅವರನ್ನು ಸ್ವೀಡನ್ಗೆ ಗಡಿಪಾರು ಮಾಡುವಂತೆ ಆಗ್ರಹಿಸಲಾಗಿತ್ತು. ಈಕ್ವೆಡಾರ್ ನ ಸರ್ಕಾರ ಅಸಾಂಜ್ ಗೆ ನೀಡಿದ್ದ ಆಶ್ರಯವನ್ನು ಹಿಂಪಡೆದಿದ್ದು, ಈ ಬೆನ್ನಲ್ಲೆ ಬ್ರಿಟನ್ ಪೊಲೀಸರು ಅಸಾಂಜ್ ನ್ನು ವಶಕ್ಕೆ ಪಡೆದಿದ್ದಾರೆ. ವಿಕಿಲೀಕ್ಸ್ ನ ಟ್ವಿಟರ್ ಖಾತೆ ಸಹ ಅಸಾಂಜ್ ಬಂಧನವನ್ನು ಸ್ಪಷ್ಟಪಡಿಸಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ಕುರಿತಾಗಿಯೂ ಅನೇಕ ಸ್ಫೋಟಕ ಮಾಹಿತಿಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿದ್ದ ಅಸಾಂಜ್ ಅಮೆರಿಕದಿಂದಲೂ ಬಂಧನ ಭೀತಿ ಎದುರಿಸುತ್ತಿದ್ದಾರೆ. ಅಸಾಂಜ್ ಅವರ ಸಾಹಸಕ್ಕಾಗಿ 2011 ರಲ್ಲಿ  ಶಾಂತಿ ಪ್ರತಿಷ್ಠಾನದ ಪ್ರತಿಷ್ಠಿತ ಪದಕ ಪಡೆದಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا