Urdu   /   English   /   Nawayathi

ಗೋಮಾಂಸ ವ್ಯಾಪಾರಿಗೆ ನಡು ಬೀದಿಯಲ್ಲಿ ಥಳಿಸಿದ ಗುಂಪು, ಹಂದಿ ಮಾಂಸ ತಿನ್ನುವಂತೆ ಒತ್ತಾಯ

share with us

ಗುವಾಹಟಿ: 09 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಗೋಮಾಂಸ ವ್ಯಾಪಾರಿ ವಿರುದ್ಧ ತಿರುಗಿಬಿದ್ದ ಯುವಕರ ಗುಂಪೊಂದು ಆತನನ್ನು ನಡು ಬೀದಿಯಲ್ಲಿ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ಶೌಕತ್​ ಅಲಿ (68) ಥಳಿತಕ್ಕೊಳಗಾದ ವ್ಯಕ್ತಿ. ಬಿಸ್ವಂತ್​ ಚರಿಯಲ್ ನಗರದಲ್ಲಿ ಹೋಟೆಲ್​ವೊಂದನ್ನು ನಡೆಸುತ್ತಿದ್ದ ಅವರನ್ನು ಹಿಡಿದು ನಡುಬೀದಿಗೆ ತಂದ ಆಕ್ರೋಶಿತರ ಗುಂಪು ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ. ಅಲ್ಲದೇ ಶೌಕತ್​ಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಗುಂಪನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا