Urdu   /   English   /   Nawayathi

ವಿದೇಶಗಳಿಂದ ಹಣದ ರವಾನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ, 2018ರಲ್ಲಿ 79 ಶತಕೋಟಿ ಡಾಲರ್ ರವಾನೆ

share with us

ವಾಷಿಂಗ್ಟನ್: 09 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಭಾರತವು ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 2018 ರಲ್ಲಿ 79 ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಬಾರತಕ್ಕೆ ಕಳುಹಿಸಲಾಗಿದೆ. ಈ ಮೂಲಕ ಭಾರತವು ತನ್ನ ದೇಶದ ವಿದೇಶಿ ಹೂಡಿಕೆದಾರರ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ. ಭಾರತದ ಬಳಿಕ ಈ ಪಟ್ಟಿಯಲ್ಲಿ ಚೀನಾ  (67 ಶತಕೋಟಿ ಡಾಲರ್), , ಮೆಕ್ಸಿಕೊ (36 ಶತಕೋಟಿ ಡಾಲರ್), ಫಿಲಿಪೈನ್ಸ್ (34 ಶತಕೋಟಿ ಡಾಲರ್) ಮತ್ತು ಈಜಿಪ್ಟ್ (29 ಶತಕೋಟಿ ಡಾಲರ್). ರಾಷ್ಟ್ರಗಳಿದೆ. ವಿಶ್ವ ಬ್ಯಾಂಕಿನ ವಲಸೆ ಮತ್ತು ಅಭಿವೃದ್ಧಿ ವಿಭಾಗದ ಸಂಕ್ಷಿಪ್ತ ಅಂಕಿ ಅಂಶಗಳ ವರದಿಯ ಆಧಾರದಲ್ಲಿ ಭಾರತವು ಹಣ ಪಾವತಿ ಮಾಡುವಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತ ವಿದೇಶಗಳಿಂದ ಪಡೆದ ಹಣದಲ್ಲಿ ಹೆಚ್ಚಳವಾಗುತ್ತಾ ಬಂದಿದೆ 2016 ರಲ್ಲಿ 62.7 ಶತಕೋಟಿ ಡಾಲರ್ ಹಣ ಹರಿದು ಬಂದರೆ 2017 ರಲ್ಲಿ  65.3 ಶತಕೋಟಿ ಡಾಲರ್ ಹಣ ಬಂದಿತ್ತು. "ಈ ಸಾಲಿನಲ್ಲಿ ಭಾರತಕ್ಕೆ ಶೇ.14ರಷ್ಟು ಹೆಚ್ಚುವರಿ ಹಣ ಹರಿದು ಬಂದಿದೆ. ಕೇರಳದ ಪ್ರವಾಹ ವಿಪತ್ತಿನ ಹಿನ್ನೆಲೆಯಲ್ಲಿ ಅನೇಕ ವಲಸಿಗರು ತಮ್ಮ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಇಡಿದ್ದು ಈ ಹೆಚ್ಚಳಕ್ಕೆ ಕಾರಣವಾಗಿದೆ." ಇದೇ ವೇಳೆ ಸೌದಿ ಅರೇಬಿಯಾದಲ್ಲಿ ಉಂಟಾದ ಹಣದುಬ್ಬರದ ಕಾರಣ ಪಾಕಿಸ್ತಾನಕ್ಕೆ ಹಣದ ಪೂರೈಕೆ ವ್ಯತ್ಯಯವಾಗಿದೆ.ಏಳು ಶೇ. ದಷ್ಟು ಹಣದ ಹರಿವಿನ ಪ್ರಮಾಣ ಇಳಿದಿದೆ ಎಂದು ಬ್ಯಾಂಕ್ ವರದಿ ಮಾಡಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا