Urdu   /   English   /   Nawayathi

ಮುಸ್ಲಿಂ ಲೀಗ್ ಎಂಬುದು ವೈರಸ್; ಆದಿತ್ಯನಾಥ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

share with us

ಮಲಪ್ಪುರಂ: 06 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮುಸ್ಲಿಂ ಲೀಗ್ ಎಂಬುದು ವೈರಸ್, ಈ ವೈರಸ್ ದಾಳಿಗೆ ತುತ್ತಾದರೆ ಯಾರೊಬ್ಬರೂ ಪಾರಾಗುವುದಿಲ್ಲ. ಇದೀಗ ವಿಪಕ್ಷ ಕಾಂಗ್ರೆಸ್‍ ಇದರ ದಾಳಿಗೆ ತುತ್ತಾಗಿದೆ. ಇವರು ಗೆದ್ದರೆ ಏನಾಗಬಹುದು ಎಂದು ಯೋಚಿಸಿ. ಈ ವೈರಸ್ ಇಡೀ ದೇಶದಲ್ಲಿ ಹರಡುತ್ತದೆ ಎಂದ ಯೋಗಿ ಆದಿತ್ಯನಾಥರ ಟ್ವೀಟ್ ವಿರುದ್ಧ ಮುಸ್ಲಿಂ ಲೀಗ್,  ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Chowkidar Yogi Adityanath✔@myogiadityanath

मुस्लिम लीग एक वायरस है। एक ऐसा वायरस जिससे कोई संक्रमित हो गया तो वो बच नहीं सकता और आज तो मुख्य विपक्षी दल कांग्रेस ही इससे संक्रमित हो चुका है।

सोचिये अगर ये जीत गए तो क्या होगा ? ये वायरस पूरे देश मे फैल जाएगा।

21.5K

9:57 AM - Apr 5, 2019

Twitter Ads info and privacy

8,293 people are talking about this

ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆಗಳಿದಿರುವುದರ ಬಗ್ಗೆ ಟೀಕೆ ಮಾಡಿ ಯೋಗಿ ಈ ಟ್ವೀಟ್ ಮಾಡಿದ್ದರು.

View image on TwitterView image on Twitter

ANI✔@ANI

Delhi: Indian Union Muslim League (IUML) delegation arrives at the Election Commission of India office to complaint against UP CM Yogi Adityanath, for his comment: 'Muslim League is a virus & Congress is infested with it.'

260

11:30 AM - Apr 6, 2019

122 people are talking about this

Twitter Ads info and privacy

ಮುಸ್ಲಿಂಲೀಗ್ ವೈರಸ್ ಅಲ್ಲ ಆ್ಯಂಟಿ ವೈರಸ್: ಕುಞಾಲಿ ಕುಟ್ಟಿ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಞಾಲಿಕುಟ್ಟಿ,  ಮುಸ್ಲಿಂ ಲೀಗ್ ವೈರಸ್ ಅಲ್ಲ ಆ್ಯಂಟಿ ವೈರಸ್ ಎಂದು ಹೇಳಿದ್ದಾರೆ. ಹಲವಾರು ಸಂದರ್ಭಗಳ್ಲಿ ಸಿಪಿಎಂ ಕೂಡಾ ಮುಸ್ಲಿಂ ಲೀಗ್‍ನ ಮಧ್ಯಪ್ರವೇಶವನ್ನು ಬಯಸಿತ್ತು. ಕೋಮು ಸಂಘರ್ಷವುಂಟಾದಾಗ ಅದನ್ನು ನಿಯಂತ್ರಿಸಿದ್ದಕ್ಕೆ ಸಿಪಿಎಂ  ನಮ್ಮನ್ನು ಶ್ಲಾಘಿಸಿದ್ದೂ ಇದೆ. ಚುನಾವಣಾ ಆಯೋಗ ಅಂಗೀಕರಿಸಿದ ಪಕ್ಷ  ನಮ್ಮದು. ಹೀಗಿರುವಾಗ ಯೋಗಿ ಆದಿತ್ಯನಾಥ ಈ ರೀತಿ ಹೇಳಿದ್ದು ಸರಿಯಲ್ಲ. ಎಂದೆಂದಿಗೂ ನಾವು ಕೋಮುವಾದಿ ಪಕ್ಷಗಳ ವಿರುದ್ಧವೇ ನಿಲುವು ಹೊಂದಿದ್ದೇವೆ. ವೈರಸ್ ಯಾರು ಎಂಬುದನ್ನು ನಾನು ಹೇಳುವುದಿಲ್ಲ ಎಂದು ಕುಞಾಲಿ ಕುಟ್ಟಿ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ. 

ಭಾರತದಲ್ಲಿರುವ ವೈರಸ್ ಬಿಜೆಪಿ: ಚೆನ್ನಿತ್ತಲ
ಕೊಚ್ಚಿ: ಚುನಾವಣಾ ಆಯೋಗ ಅಂಗೀಕರಿಸಿದ ಪಕ್ಷನ್ನು ವೈರಸ್ ಎಂದು ಹೇಳುವ ಮೂಲಕ ಯೋಗಿ ಆದಿತ್ಯನಾಥ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕೇರಳದ  ವಿಪಕ್ಷ ನಾಯಕ  ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ನಿಜವಾಗಿಯೂ ಭಾರತಕ್ಕೆ ಬಾಧಿಸಿರುವ ವೈರಸ್ ಬಿಜೆಪಿ. ಜನರ ನಡುವೆ ಜಗಳ ತಂದಿಟ್ಟು, ಕೋಮುವಾದದ ಭಾವನೆ ಕೆರಳುವಂತೆ ಮಾಡುವ ಪಕ್ಷ ಬಿಜೆಪಿ ಎಂದಿದ್ದಾರೆ ಚೆನ್ನಿತ್ತಲ. ಆದಾಗ್ಯೂ,ಹಿಂದೂಗಳಿಗೆ ಹೆದರಿ ರಾಹುಲ್ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು  ಮೋದಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಮೋದಿ ವಯನಾಡಿನ ಜನರನ್ನು ಅವಮಾನಿಸಿದ್ದಾರೆ. ವಯನಾಡಿನಲ್ಲಿ ಶೇ. 52ರಷ್ಟು ಹಿಂದೂಗಳಿದ್ದಾರೆ. ಎಲ್ಲ ಜಾತಿ, ಮತ, ಧರ್ಮಗಳಿಗೆ ಸೇರಿದ ಜನರು ಇಲ್ಲಿ ಜತೆಯಾಗಿ ಬದುಕುತ್ತಿರುವಾಗ ಅವರನ್ನು ಜಾತಿ, ಧರ್ಮದ ಹೆಸರಿನಿಂದ ವಿಭಜಿಸುವ ಈ ಹೇಳಿಕೆಗಳು ಆಕ್ಷೇಪಾರ್ಹ. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಎಂಬ ವೈರಸ್‌ನ್ನು ಹೊಡೆದೋಡಿಸಲಿದ್ದಾರೆ ಎಂದು ಚೆನ್ನಿತ್ತಲ ಹೇಳಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا