Urdu   /   English   /   Nawayathi

ವಾಯುನೆಲೆ ಬಳಿ ಸಜೀವ ಬಾಂಬ್ ಪತ್ತೆ, ರಾಜಸ್ಥಾನದಲ್ಲಿ ಹೈ ಅಲರ್ಟ್

share with us

ಬಿಕಾನೇರ್: 03 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಜಸ್ಥಾನದ ಬಿಕಾನೇರ್ ಪಟ್ಟಣದ ಬಳಿ ಭಾರತೀಯ ವಾಯು ಪಡೆಯ ವಾಯು ನೆಲೆ ಸಮೀಪ ಇಂದು ಬೆಳಗ್ಗೆ ಸಜೀವ ಮೋರ್ಟಾರ್ ಬಾಂಬ್ ಪತ್ತೆಯಾಗಿದೆ ಇದರಿಂದ ಆಪ್ರದೇಶದಲ್ಲಿ ಆತಂಕ ವಾತಾವರಣ ಸೃಷ್ಟಿಯಾಗಿತ್ತು. ಪ್ರಕರಣದ ತುರ್ತು ತನಿಖೆಗಾಗಿ ಭಾರತೀಯ ವಾಯು ಪಡೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಭಾರತ ಮತ್ತು ಪಾಕ್ ಗಡಿಯಲ್ಲಿ ಗುಂಡಿನ ಹಾಗೂ ಶೆಲ್ ದಾಳಿಯ ಚಕಮಕಿ ನಡೆಯುತ್ತಿರುವ ನಡುವೆಯೇ ಈ ವಿದ್ಯಮಾನವು ಇನ್ನಷ್ಟು ಉದ್ವಿಗ್ನತೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ರಾಜಸ್ತಾನ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಂಜಾಬ್ ಗಡಿ ಸಮೀಪಕ್ಕೆ ಪಾಕಿಸ್ತಾನದ ನಾಲ್ಕು ಎಫ್16 ಯುದ್ಧ ವಿಮಾನಗಳು ಹಾರಿ ಬಂದಾಗ ಭಾರತೀಯ ವಾಯು ಪಡೆಯ ಸುಖೋಯಿ 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ಅವುಗಳನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಿದ್ದವು. ಪಾಕ್ ಯುದ್ಧ ವಿಮಾನಗಳ ಜತೆಗೆ ಕಣ್ಗಾವಲಿನ ಡ್ರೋಣ್‍ಗಳೂ ಕೂಡ ಹಾರಿ ಬಂದಿದ್ದವು ಗಡಿಯ ಯಾವ ಭಾಗಗಳಲ್ಲಿ ಭಾರತೀಯ ಸೇನಾ ಪಡೆ ನಿಯೋಜಿಸಲ್ಪಟ್ಟಿದೆ ಎಂಬುದನ್ನು ಪತ್ತೆ ಹಚ್ಚಲು ಪಾಕಿಸ್ತಾನ ಡ್ರೋಣ್‍ಗಳನ್ನು ಹಾರಿಸಲ್ಪಟ್ಟಿರಬೇಕೆಂದು ಎಂದು ಶಂಕಿಸಲಾಗಿದೆ.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا