Urdu   /   English   /   Nawayathi

ಭಾರತದ ಲಾಬಿಯಿಂದಾಗಿ ಪಾಕ್ ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆ: ಖುರೇಶಿ ಆತಂಕ

share with us

ಲಾಹೋರ್‌: 03 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಭಾರತದ ಲಾಬಿಯಿಂದಾಗಿ ಪಾಕಿಸ್ತಾನ ಹಣಕಾಸು ಕಾರ್ಯ ಪಡೆ(ಎಫ್ಎಟಿಎಫ್) ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಅವರು ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿದರೆ ಪಾಕಿಸ್ಥಾನ ವರ್ಷಕ್ಕೆ 10 ಶತಕೋಟಿ ಅಮೆರಿಕನ್‌ ಡಾಲರ್‌ ನಷ್ಟ ಅನುಭವಿಸಬೇಕಾದೀತು ಎಂದು ಖುರೇಶಿ ಹೇಳಿದ್ದಾರೆ. ಒಂದೊಮ್ಮೆ ಎಫ್ಎಟಿಎಫ್ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಿದಲ್ಲಿ ಅದರಿಂದಾಗುವ ವಾರ್ಷಿಕ ನಷ್ಟ ಎಷ್ಟೆಂಬುದನ್ನು ಈಗ ಲೆಕ್ಕ ಹಾಕಲಾಗುತ್ತಿದೆ. ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂಬ ಪ್ರಭಾವೀಕರಣದ ಅಭಿಯಾನವನ್ನು ಭಾರತ ನಡೆಸುತ್ತಿದೆ ಎಂದು ಖುರೇಶಿ ಆರೋಪಿಸಿದ್ದಾರೆ. ಪಾಕಿಸ್ಥಾನ ಎಫ್ಎಟಿಎಫ್ ಗ್ರೇಲಿಸ್ಟ್‌ನಲ್ಲೇ ಉಳಿದುಕೊಂಡರೂ ವರ್ಷಕ್ಕೆ 10 ಶತಕೋಟಿ ಡಾಲರ್‌ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಖುರೇಶಿ ಎಚ್ಚರಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಪ್ಯಾರಿಸ್‌ನ ಎಫ್ಎಟಿಎಫ್ ಪಾಕಿಸ್ಥಾನವನ್ನು ಗ್ರೇಲಿಸ್ಟ್‌ಗೆ ಹಾಕಿತ್ತು. ಹೀಗೆ ಮಾಡುವುದರ ಅರ್ಥವೇನೆಂದರೆ ಈ ಪಟ್ಟಿಗೆ ಸೇರಿಸಲಾಗಿರುವ ದೇಶದಲ್ಲಿನ ಕಾನೂನುಗಳು ಅಕ್ರಮ ಹಣ ಮತ್ತು ಭಯೋತ್ಪಾದನೆಗೆ ಹಣ ಒದಗಿಸುವ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಲ್ಲಿ ದುರ್ಬಲವಾಗಿವೆ ಎಂಬುದೇ ಆಗಿದೆ. ಪಾಕಿಸ್ಥಾನವನ್ನು ಗ್ರೇ ಲಿಸ್ಟ್‌ ನಿಂದ ಮುಕ್ತಗೊಳಿಸುವ ಸಲುವಾಗಿ ಇತ್ತೀಚೆಗೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಎಫ್ಎಟಿಎಫ್ ನ ಪರಿಣತರ ತಂಡ, ಪಾಕ್‌ ಸರ್ಕಾರ ಹಣಕಾಸು ಅಕ್ರಮ ವರ್ಗಾವಣೆ (ಹವಾಲಾ) ಅಪರಾಧಗಳನ್ನು ತಡೆಯುವಲ್ಲಿ ಜಾಗತಿಕ ಮಟ್ಟಕ್ಕೆ ಅನುಗುಣವಾದ ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂಬುದರ ಪರಾಮರ್ಶೆ ನಡೆಸಿತ್ತು. ಆದರೆ ಫ‌ಲಿತಾಂಶ ನಕಾರಾತ್ಮಕವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا