Urdu   /   English   /   Nawayathi

ಮೊನ್ನೆ ಬಂಧಿಸಲಟ್ಟಿದ್ದ ಅತ್ಯಾಚಾರ ಆರೋಪಿ ನಿನ್ನೆ ಮಣಿಪಾಲ ಪೊಲೀಸರ ಬಂಧನದಿಂದ ಪರಾರಿ!

share with us

ಉಡುಪಿ: 02 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) 17 ವರ್ಷದ ಯುವತಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣದ ಆರೋಪಿ ಮಣಿಪಾಲ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿ ಹನುಮಂತಪ್ಪನನ್ನು ಮಣಿಪಾಲ ಪೊಲೀಸರು ಮಾರ್ಚ್ 29 ರಂದು ಬಂಧಿಸಿದ್ದರು. ಮಾರ್ಚ್ 31 ಶನಿವಾರ ಹನುಮಂತಪ್ಪನನ್ನು ಮಣಿಪಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಾಸು ಕರೆತರುವಾಗ ಆತ ಪರಾರಿಯಾಗಿದ್ದಾನೆ. ನ್ಯಾಯಾಧೀಶರು ಹನುಮಂತಪ್ಪನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಮಾರ್ಚ್ 9 ರಂದು ಹನುಮಂತಪ್ಪ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ. ಆಕೆಯ ಗೆಳೆತನ ಬೆಳೆಸಿದ್ದ ಹನುಅಂತಪ್ಪ ಆಕೆಗೆ ಒಳ್ಳೆಯ ಕೆಲಸ ಕೊಡುವುದಾಗಿ ಪುಸಲಾಯಿಸಿದ್ದ.ಬಳಿಕ ಆಕೆಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ.

ಕ, ಕ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا