Urdu   /   English   /   Nawayathi

ಅಂಡಮಾನ್‍ನಲ್ಲಿ 2 ಗಂಟೆಗಳ ಅಂತರದಲ್ಲಿ 9 ಬಾರಿ ಭೂಕಂಪ..!

share with us

ನವದೆಹಲಿ: 01 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಇಂದು ಮುಂಜಾನೆಯಿಂದ ಎರಡು ಗಂಟೆಗಳ ಅಂತರದಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 4.7 ರಷ್ಟು ಮತ್ತು 5.2 ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಮಾಪನ ಇಲಾಖೆ ಕೇಂದ್ರ ಹೇಳಿದೆ. ಇಂದು ಮುಂಜಾನೆ 5.14ರ ಸಮಯದಲ್ಲಿ ಸುಮಾರು 4.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಕೆಲವು ನಿಮಿಷಗಳ ಅಂತರದಲ್ಲಿ 5ಭಾರಿ ಇಷ್ಟೆ ತೀವ್ರತೆಯಲ್ಲಿ ಭೂಮಿ ನಡುಗಿದೆ. ಕೊನೆಯದಾಗಿ ಭೂಮಿ 6.54ರಷ್ಟು ಪ್ರಮಾಣದಲ್ಲಿ ಭೂಮಿ ಕಂಪಿಸಿರುವ ದಾಖಲೆಯ ಮಟ್ಟದ ಭ್ಠೂಮಿ ಕಂಪನವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದು ಎರಡು-ಮೂರು ದಿನದಲ್ಲಿ ಈ ರೀತಿಯ ಕಂಪ ಅಸಾಮಾನ್ಯವಾದದ್ದಾಗಿದೆ. 9ನೇ ಹಾಗೂ ಕೊನೆಯ ಭೂಕಂಪ 6.54ರ ಹೊತ್ತಿಗೆ 5.2 ಅಂಕಗಳ ತೀವ್ರತೆಯಲ್ಲಿ ಸಂಭವಿಸಿತು ಎಂದು ಕೇಂದ್ರ ತಿಳಿಸಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ. ದಿನಕ್ಕೆ ಎರಡು ಮೂರು ಭೂಕಂಪಗಳು ಸಂಭವಿಸುವುದು ಕೂಡ ಅಸಾಮಾನ್ಯವೇನೂ ಅಲ್ಲ.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا